More

    ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಮೋಸ

    ಬೀದರ್: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 2000 ರೂ. ಮಾತ್ರ ಪಾವತಿಸಿ ರೈತರಿಗೆ ಮೋಸ ಮಾಡುತ್ತಿವೆ ಎಂದು ರೈತ ಸಂಘ (ಕೋಡಿಹಳ್ಳಿ ಬಣ) ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ದೂರಿದ್ದಾರೆ.

    ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದ ಅವರು, ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ದೇಶನ ನೀಡಿದರೂ ಕಾರ್ಖಾನೆಗಳು ಉತ್ತಮ ಬೆಲೆ ನೀಡುತ್ತಿಲ್ಲ. ನೆರೆಯ ಮಹಾರಾಷ್ಟ್ರದ ಜಾಗೃತಿ ಸಕ್ಕರೆ ಕಾರ್ಖಾನೆ ಟನ್‌ಗೆ ಮೊದಲ ಕಂತಾಗಿ 2400 ರೂ. ಮತ್ತು ಎರಡನೇ ಕಂತಾಗಿ 215 ರೂ. ಸೇರಿ ಒಟ್ಟು 2615 ರೂ. ಪಾವತಿಸಿದೆ. ಹೀಗಿರುವಾಗ ನಮ್ಮವರಿಗೇನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.

    ಬಸವನ ಹುಳು ಬಾಧೆ ಹಾಗೂ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದು, ತಕ್ಷಣ ಸಮೀಕ್ಷೆ ಮಾಡಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts