More

    ಸಕ್ಕರೆ ಇಳುವರಿ (ರಿಕವರಿ) ಗೋಲ್ಮಾಲ್ ತನಿಖೆಗೆ ಸಮಿತಿ

    ಬೀದರ್: ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ (ರಿಕವರಿ) ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪದ ಸತ್ಯಾಸತ್ಯತೆ ಅರಿಯಲು ಸರ್ಕಾರ ತನಿಖೆಗೆ ಮುಂದಾಗಿದೆ.

    ರಿಕವರಿ ಗೋಲ್ಮಾಲ್ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲೆಯಲ್ಲಿ ನಾಲ್ಕೈದು ವರ್ಷಗಳಿಂದ ಸಕ್ಕರೆ ಇಳುವರಿ ಕಮ್ಮಿ ತೋರಿಸಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಗಮನ ಸೆಳೆದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಇಳುವರಿ ಕುರಿತು ಪರಿಶೀಲನೆಗೆ ತಂಡ ರಚಿಸಲಾಗಿದೆ.

    ಅಧಿಕಾರಿಗಳನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಇಳುವರಿ ಗುರುತಿಸುವಲ್ಲಿ ಆಗುತ್ತಿರುವ ನ್ಯೂನತೆ ಬಗ್ಗೆ ಪರಿಶೀಲಿಸಿ ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಸಕ್ಕರೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಶಂಕರ ಪಾಟೀಲ್ ಮುನೇನಕೊಪ್ಪ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಳಗಾವಿಯಲ್ಲಿನ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ಟಿಪ್ಪಣಿ ಬರೆದು ನಿರ್ದೇಶನ ನೀಡಿದ್ದಾರೆ.

    ಉದ್ದೇಶಪೂರ್ವಕವಾಗಿ ರಿಕವರಿ ಕಮ್ಮಿ ತೋರಿಸಿ ಹೆಚ್ಚಿನ ಸಕ್ಕರೆ ಇತರ ಉತ್ಪನ್ನಗಳನ್ನು ಕಾಳಸಂತೆಗೆ ಮಾರಲಾಗುತ್ತಿದೆ ಎಂಬ ರೈತರು ದೂರು ಪ್ರತಿವರ್ಷ ನೀಡುತ್ತಿದ್ದರು. ಈ ಹಿಂದೆ ಯಾರೂ ಇದರ ಹಕೀಕತ್ತು ಏನಿದೆ ಎಂದು ಅರಿಯುವ ಗೋಜಿಗೆ ಹೋಗಿಲ್ಲ. ಇದರ ಆಳಕ್ಕಿಳಿಯುವ ಪ್ರಯತ್ನವೂ ಮಾಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಕ್ಕರೆ ಕಾರ್ಖಾನೆಗಳಿಗೆ ತಂಡ ಕಳುಹಿಸಿ ಪರಿಶೀಲನೆ ನಡೆಸಲು ಸಕರ್ಾರ ನಿರ್ಧರಿಸಿದೆ.

    ಇತ್ತೀಚೆಗೆ ನಗರದಲ್ಲಿ ಸಚಿವ ಶಂಕರ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಈ ವಿಷಯದ ಬಗ್ಗೆ ಗಂಭೀರ ಚರ್ಚೆಯಾಗಿತ್ತು. ಜಿಲ್ಲೆಯ ಕಾರ್ಖಾನೆಗಳು ಕಮ್ಮಿ ಇಳುವರಿ ತೋರಿಸುತ್ತಿರುವೆ ಎಂದು ಜನಪ್ರತಿನಿಧಿಗಳು ಆರೋಪ ಮಾಡಿದ್ದರು. ತಜ್ಞರ ತಂಡ ಕಳುಹಿಸಿ ಪರಿಶೀಲನೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು.

    2 ಸಾವಿರ ರೂ.ಗೆ ಸೀಮಿತವಾದ ಬೆಲೆ: ಪ್ರಸಕ್ತ ವರ್ಷ ಟನ್ ಕಬ್ಬಿಗೆ ಜಿಲ್ಲೆಯ ವಿವಿಧ ಸಕ್ಕರೆ ಕಾಖರ್ಾನೆಗಳು 2000 ರೂ. ರೈತರ ಖಾತೆಗೆ ಜಮೆ ಮಾಡಿವೆ. ಇದಕ್ಕಿಂತ ಹೆಚ್ಚು ಹಣ ಕೊಡುವ ಅನುಮಾನವಿದ್ದು, ಟನ್ಗೆ 2 ಸಾವಿರ ರೂ.ಗೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಸಹಕಾರ ಸೇರಿ ಜಿಲ್ಲೆಯ ಎಲ್ಲ ಸಕ್ಕರೆ ಕಾಖರ್ಾನೆಯವರು ಕಬ್ಬಿನ ಬೆಲೆ ಟನ್ಗೆ ಎಷ್ಟು ಎಂಬುದನ್ನು ಕ್ರಷಿಂಗ್ಗೆ ಮುನ್ನ ಘೋಷಿಸಬೇಕೆಂಬ ರೈತರ ಬೇಡಿಕೆಗೆ ಯಾವತ್ತೂ ಮನ್ನಣೆ ಸಿಕ್ಕಿಲ್ಲ. ಕಳೆದೊಂದು ದಶಕದಿಂದ ಯಾವೊಂದು ಕಾಖರ್ಾನೆ ಕಬ್ಬಿನ ದರ ಮುಂಚಿತ ನಿಗದಿಪಡಿಸುತ್ತಿಲ್ಲ. ಹೀಗಾಗಿ ಕಾಖರ್ಾನೆಯವರು ಕೊಟ್ಟಷ್ಟೇ ಎಂಬಂತಾಗಿದೆ ರೈತರ ಪರಿಸ್ಥಿತಿ.

    ಜಿಲ್ಲೆಯ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ತೀರಾ ಕಮ್ಮಿ ಬರುತ್ತಿದ್ದು, ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿರಲಿಲ್ಲ. ಈ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿದ್ದಕ್ಕೆ ಸರ್ಕಾರ ತಜ್ಞರ ತಂಡದಿಂದ ಪರಿಶೀಲನೆ ಮಾಡಲು ಆದೇಶ ಹೊರಡಿಸಿದ್ದು ಸ್ವಾಗತ. ಕೂಡಲೇ ಇಳುವರಿ ಕುರಿತು ಪರಿಶೀಲನೆ ನಡೆಸಿ ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಬೇಕು.
    | ಅರವಿಂದಕುಮಾರ ಅರಳಿ, ವಿಧಾನ ಪರಿಷತ್ ಸದಸ್ಯ

    ಟನ್ ಕಬ್ಬಿಗೆ ಸದ್ಯ 2 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ಸಕ್ಕರೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಶಂಕರ ಪಾಟೀಲ್ ಅವರು ಕೂಡಲೇ ಎಲ್ಲ ಕಾಖರ್ಾನೆಗಳ ಸಭೆ ನಡೆಸಿ ಟನ್ಗೆ ಕನಿಷ್ಠ 2500 ರೂ. ನಿಗದಿ ಮಾಡುವಂತೆ ಸೂಚಿಸಬೇಕು.
    | ಮಲ್ಲಿಕಾರ್ಜುನ ಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts