More

    ಸಕಾಲದಲ್ಲಿ ಜನರ ಕೆಲಸ ಮಾಡಿಕೊಡಿ


    ಯಾದಗಿರಿ: ಸಾರ್ವಜನಿಕರಿಂದ ದೂರು ಬರದಂತೆ ನಿಗಾ ವಹಿಸಲು, ಸಕರ್ಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಳಂಬ ಮಾಡದೆ ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಅಕಾರಿಗಳು ಶ್ರಮಿಸುವಂತೆ ಲೋಕಾಯುಕ್ತ ಸಿಪಿಐ ಹಣಮಂತ ಸಣಮನಿ ತಿಳಿಸಿದರು.

    ಶಹಾಪುರದ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಕರ್ಾರಿ ಇಲಾಖೆಗಳಡಿ ಅನುಷ್ಠ್ಠಾನಗೊಳ್ಳುವ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪುವ ಕೆಲಸವಾಗಬೇಕು. ಅಂದಾಗ ಮಾತ್ರ ಜನರಿಂದ ಅಕಾರಿಗಳ ವಿರುದ್ಧ ನಮ್ಮಲ್ಲಿ ದೂರು ಬರುವುದಿಲ್ಲ ಎಂದರು.

    ಹಲವು ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಅನಗತ್ಯವಾಗಿ ವಿಳಂಬ ಮಾಡಲಾಗುತ್ತದೆ. ಇದರಿಂದ ಜನತೆ ನಿತ್ಯ ಸಕರ್ಾರಿ ಕಚೇರಿಗೆ ಅಲೆದು ಕೊನೆ ನ್ಯಾಯ ಒದೊಗಿಸುವಂತೆ ನಮ್ಮ ಬಳಿ ಬರುತ್ತಾರೆ. ಸಕರ್ಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಕಳಪೆ ಕಾಮಗಾರಿ, ಲಂಚದ ಬೇಡಿಕೆ, ಅಕಾರಿಗಳು ಕಾಲ ಮಿತಿಯಲ್ಲಿ ಸೇವೆ ನೀಡಿಲ್ಲ. ಇಲಾಖೆಯಲ್ಲಿ ಹಣದ ಅವ್ಯವಹಾರ ಸೇರಿ ಇತರೆ ಅಗತ್ಯ ಸೇವೆಗಳ ಕುರಿತು ಸಾರ್ವಜನಿಕರಿಂದ ಲೋಕಾಯುಕ್ತದಲ್ಲಿ ದಾಖಲಾಗುವ ದೂರುಗಳನ್ನು ಏಕಮುಖವಾಗಿ ಸ್ವೀಕರಿಸಲ್ಲ. ನಿಗದಿತ ದೂರಿಗೆ ಸಂಬಂಸಿದಂತೆ ದೂರುದಾರರಿಂದ ಪೂರಕ ಸೂಕ್ತ ದಾಖಲೆಗಳನ್ನು ಪರಿಶೀಲಿಸಿಯೇ ಪ್ರಕರಣ ದಾಖಲಿಸಲಾಗುತ್ತದೆ ಎಂದು ವಿವರಿಸಿದರು.ತಾಪಂ ಇಒ ಸೋಮಶೇಖರ ಬಿರಾದಾರ, ತಹಸಿಲ್ದಾರ್ ಉಮಾಕಾಂತ, ಸಿಪಿಐ ಚನ್ನಯ್ಯ ಹಿರೇಮಠ, ವಿಜಯಕುಮಾರ ಬಿರಾದಾರ, ಸಹಾಯಕ ನಿದರ್ೇಶಕ ಭೀಮರಾಯ ಬಿರಾದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts