More

    ಸಕಾರಾತ್ಮಕ ಚಿಂತನೆಯಿಂದ ರೋಗ ದೂರ

    ವಿಜಯವಾಣಿ ಸುದ್ದಿಜಾಲ ಶಿರಸಿ: ಮನಸ್ಸಿನ ಸಕಾರಾತ್ಮಕ ಚಿಂತನೆ ಹಾಗೂ ದೇವರಲ್ಲಿನ ಶ್ರದ್ಧೆಯಿಂದ ಕರೊನಾ ರೋಗ ದಿಂದ ಪಾರಾಗಬಹುದಾಗಿದ್ದು, ಅದಕ್ಕಾಗಿ ಭಗವದ್ಗೀತೆ ಸಹಕಾರಿಯಾಗಲಿದೆ ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

    ಭಗವದ್ಗೀತಾ ಅಭಿಯಾನದ ಕುರಿತು ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಆನ್​ಲೈನ್ ಮೀಟಿಂಗ್​ನಲ್ಲಿ ಅವರು ಮಾತನಾಡಿದರು. ಗೀತೆಯ ಚಿಂತನೆ ಹಾಗೂ ಪಠಣ ವರ್ತಮಾನದ ಸಂದರ್ಭದಲ್ಲಿ ಅಗತ್ಯವಿದೆ. ಕರೊನಾ ರೋಗದ ಕಾರಣದಿಂದ ಜನರೆಲ್ಲ ಬೇಸರ, ಆತಂಕಗಳಿಗೆ ಒಳಗಾಗಿದ್ದಾರೆ. ಅವರ ಕ್ಲೇಶ ದೂರವಾಗಲು ಗೀತೆಯ ಪಠಣ ಆಗಬೇಕು ಎಂದರು.

    ಈ ವರ್ಷ ಭಗವದ್ಗೀತಾ ಅಭಿಯಾನವನ್ನು ವಿಭಿನ್ನ ರೀತಿಯಲ್ಲಿ ನಡೆಸಲಾಗುತ್ತದೆ. ಅಭಿಯಾನ ಮನೆಮನೆಗಳಲ್ಲಿ ನಡೆಯಬೇಕು. ಈ ಬಾರಿ 3ನೇ ಅಧ್ಯಾಯವಾದ ಕರ್ಮಯೋಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 2020ರ ಡಿಸೆಂಬರ್ 18ರಿಂದ ಮೂರನೇ ಅಧ್ಯಾಯ ಪಠಣ ಮಾಡಬೇಕು. ಡಿ. 25ಕ್ಕೆ 18 ಅಧ್ಯಾಯಗಳನ್ನು ಪಠಿಸಿ ಗೀತಾ ಜಯಂತಿಯನ್ನು ಆಚರಿಸಬೇಕು. ಇದಕ್ಕೂ ಮೊದಲು ಇದರ ಅಭ್ಯಾಸ ಮಾಡಿಕೊಂಡಿರಬೇಕು. ದೇವಾಲಯ, ಸಮಾಜ ಮಂದಿರ, ಶಂಕರ ಮಠ, ರಾಘವೇಂದ್ರ ಮಠಗಳಲ್ಲಿ ಕರೊನಾ ನಿಯಮಕ್ಕೆ ಒಳಪಟ್ಟು ಪಠಣ ಮಾಡಬೇಕು. ಭಗವದ್ಗೀತೆಯ ಜತೆ, ಶ್ರೀಧನ್ವಂತರಿ ಸಹಸ್ರನಾಮ ಪಾರಾಯಣವನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕು ಎಂದು ತಿಳಿಸಿದರು.

    ಈ ವೇಳೆ ಕಾರ್ಯಕರ್ತರಿಗೆ ಕೆಲವು ಸೂಚನೆಗಳನ್ನು ನೀಡಲಾಯಿತು. ಜಿಲ್ಲಾಮಟ್ಟದಲ್ಲಿ ತಾಲೂಕು ಮಟ್ಟದ ಆನ್​ಲೈನ್ ಮೀಟಿಂಗ್ ನಡೆಸಿ ಪ್ರತಿ ಮನೆಯಲ್ಲಿ ಗೀತಾ ಪಠಣ ನಡೆಯುವಂತೆ ಮಾಡಬೇಕು. ಆನ್​ಲೈನ್ ಸ್ಪರ್ಧೆಗಳನ್ನು ಏರ್ಪಡಿಸುವ ಕುರಿತು ಚಿಂತನೆ ನಡೆಸಲಾಯಿತು. ಶ್ರೀಗಳ ನೇರಪ್ರಸಾರ ಪ್ರವಚನ ಹಾಗೂ ವಿದ್ವಾಂಸರಿಂದ ಉಪನ್ಯಾಸ ನಡೆಸುವ ಚಿಂತನೆ ನಡೆಯಿತು. ಮೀಟಿಂಗ್​ನಲ್ಲಿ ಎಲ್ಲ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಮುಖರಾದ ವೆಂಕಟ್ರಮಣ ಹೆಗಡೆ ಹುಣಸೆಕೊಪ್ಪ ಉಪಸ್ಥಿತರಿದ್ದರು. ಪ್ರೊ. ಕೆ.ವಿ.ಭಟ್ಟ ಸ್ವಾಗತಿಸಿದರು. ಸುಬ್ರಹ್ಮಣ್ಯ ಜೋಶಿ ನಿರೂಪಿಸಿದರು. ರಮೇಶ ಭಟ್ಟ ಮೆಣಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts