More

    ಸಂಸ್ಕೃತಿ ಪರಿಚಯಿಸುವ ಮಹತ್ಕಾರ್ಯ

    ಕಲಬುರಗಿ: ಭಾರತದ ಸಂಸ್ಕೃತಿಯನ್ನು ಇಡೀ ವಿಶ್ವವೇ ಅನುಸರಿಸಲು ಮುಂದೆ ಬರುತ್ತಿದ್ದು, ನಮ್ಮ ಯುವ ಪೀಳಿಗೆ ಅನಾಗರಿಕತೆಯಡೆಗೆ ಸಾಗುತ್ತಿದ್ದು, ಅವರಿಗೆ ಸಂಸ್ಕೃತಿಯನ್ನು ಪರಿಚಯಿಸುವ ಮಹತ್ಕಾರ್ಯವು ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ನಡೆಯಲಿ ಎಂದು ಮೈಸೂರು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.

    ನಗರದ ಖಮಿತ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ಸ್ವಾಗತ ಸಮಿತಿ ಮತ್ತು ಆಮಂತ್ರಿತರ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಈ ಬೃಹತ್ ಸಮಾವೇಶ ಅಭಿಮಾನದ ಸಂಗತಿಯಾಗಿದೆ. ನಡೆದಾಡುವ ದೇವರು ಶ್ರೀ ಸಿz್ದೆÃಶ್ವರ ಸ್ವಾಮೀಜಿಗಳಿಗೆ ಸಮರ್ಪಣೆ ಮಾಡಿದ್ದು, ಶ್ಲಾಘನೀಯ ಎಂದು ಹೇಳಿದರು.

    ಪ್ರಕೃತಿ ರಕ್ಷಣ, ಸುಂದರ ಸುಸಂಸ್ಕೃತ ಸಮಾಜಕ್ಕಾಗಿ ಅಪರೂಪದ ಕಾರ್ಯಕ್ರಮ ರೂಪಿಸಿದ್ದು, ಕೃಷಿ, ವಿಜ್ಞಾನ, ಉದ್ಯಮ, ಪ್ರತಿಭೆ ಸೇರಿ ವಿವಿಧ ಪ್ರದರ್ಶಿನಿಗಳನ್ನು ಏರ್ಪಡಿಸಿ, ಜ್ಞಾನ ಪರಂಪರೆಯನ್ನು ವಿಸ್ತರಿಸುವ, ಸಂಸ್ಕೃತಿ ಪಸರಿಸುವ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ನುಡಿದರು.
    ಭಾರತ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್.ಗೋವಿಂದಾಚಾರ್ಯ ಮಾತನಾಡಿ, ಪ್ರಕೃತಿಯು ಭೂಗೋಳವನ್ನು ನಿರ್ಮಿಸಿದೆ. ಮನುಷ್ಯರಾದವರು ಭೂಗೋಳಕ್ಕೆ ಹಾನಿ ಮಾಡದೇ ಇತಿಹಾಸ ನಿರ್ಮಿಸಬೇಕು. ಪ್ರಕೃತಿ ಕೇಂದ್ರಿತ ವಿಕಾಸ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಈ ದಿಸೆಯಲ್ಲಿ ಪರಂಪರೆಯ ಪ್ರಜ್ಞೆ ವಿಸ್ತರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

    ವಿಕಾಸ ಅಕಾಡೆಮಿ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಪ್ರಾಸ್ತಾವಿಕ ಮಾತನಾಡಿ, ಸ್ವರ್ಣ ಜಯಂತಿ ಮತ್ತು ಭಾರತೀಯ ಸಂಸ್ಕೃತಿ ಉತ್ಸವ ಆಯೋಜನೆ ರೂಪುರೇಷೆ ವಿವರಿಸಿದರು.
    ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿP್ಷÀಣ ಸಮಿತಿ ಅಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವ ವಹಿಸಿದರು. ಪ್ರಮುಖರಾದ ಮಾಧವರೆಡ್ಡಿ ಹೈದರಾಬಾದ್, ವಿಎಚ್‌ಪಿ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ರವೀಂದ್ರ ಧಾರಿಯಾ, ಹರ್ಷಾನಂದ ಸ್ವಾಮಿಜಿ, ವೇಣುಗೋಪಾಲರೆಡ್ಡಿ, ಡಾ.ಗುರುರಾಜ ಕರ್ಜಗಿ, ವಾಸುದೇವ ದೇಶಪಾಂಡೆ, ಡಾ.ಬಿ.ಜಿ.ಮೂಲಿಮನಿ ಇತರರು ಉಪಸ್ಥಿತರಿದ್ದರು.
    ಸಭೆಗೂ ಮುನ್ನ ಅಂತಾರಾಷ್ಟಿçÃಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ಪಂಡಿತ ನರಸಿಂಹಲು ವಡವಾಟಿ ಹಾಗೂ ಶಾರದಾ ವಡವಾಟಿ ಪ್ರಾರ್ಥನಾಗೀತೆ ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts