More

    ಸಂವಿಧಾನ ಜಾಗೃತಿ ಜಾಥಾ

    ಆಲಮೇಲ: ಸಮಾನತೆ, ಮಾನವತಾವಾದ, ಸಮಾಜವಾದ ಹಾಗೂ ಧರ್ಮ ನಿರಪೇಕ್ಷಗಳಂಥ ಮೌಲ್ಯಗಳನ್ನು ಸಂವಿಧಾನ ಜನರಿಗೆ ಕೊಡುಗೆಯಾಗಿ ನೀಡಿದೆ. ಇಂತಹ ಪವಿತ್ರ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಮರ್ಪಿಸಿರುವುದು ಸ್ಮರಣೀಯ ಎಂದು ಎಚ್.ಎ.ನಂದಿ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ಪ್ರೊ.ಎಸ್.ಎಂ.ಮಾಡ್ಯಾಳ ಹೇಳಿದರು.

    ತಾಲೂಕು ಆಡಳಿತದ ವತಿಯಿಂದ ಸ್ಥಳೀಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಭಾರತ ಸಂವಿಧಾನವು 5 ಪ್ರಮುಖ ಮೌಲ್ಯಗಳಾದ ಸ್ವಾತಂತ್ರೃ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವವನ್ನು ಪ್ರಜೆಗಳಿಗೆ ನೀಡುವ ಮೂಲಕ ಜಗತ್ತಿನಲ್ಲಿ ವಿಶೇಷ ಸ್ಥಾನ ಹೊಂದಿದೆ ಎಂದರು.

    ನಾದ ಕೆಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎಂ.ಬಂಡಗಾರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದ ಜತೆಗೆ ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ದುಶ್ಚಟಗಳಿಂದ ದೂರವಿದ್ದು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಮಹಾನ್ ನಾಯಕರ ಚರಿತ್ರೆ ಓದಬೇಕು. ಶಾಲೆಯಲ್ಲಿಯೂ ಶಿಕ್ಷಕರು ವಿದ್ಯಾರ್ಥಿಗಳಿಗೆ ದೇಶಕ್ಕಾಗಿ ತ್ಯಾಗ ಬಲಿದಾನದ ಮಾಡಿರುವ ವೀರ ಸೇನಾನಿಗಳ ಕುರಿತು ಅರಿವು ಮೂಡಿಸಬೇಕು ಎಂದರು.

    ತಹಸೀಲ್ದಾರ್ ಸುರೇಶ ಚವಲರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಪ್ ಬಿರಾದಾರ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಂದಿತಾ ಪಟ್ಟಣಶಟ್ಟಿ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

    ಜಿಪಂ ಮಾಜಿ ಸದಸ್ಯ ಬಿ.ಆರ್.ಯಂಟಮನ, ಗುಂಡು ಮೇಲಿನಮನಿ, ಜಗದೀಶ ಧಾಳಿ, ಹರೀಶ ಯಂಟಮನ, ಪಪಂ ಸದಸ್ಯರಾದ ಡಾ.ಸಂಜೀವಕುಮಾರ ಯಂಟಮನ, ಜೈಭೀಮ ನಾಯ್ಕೋಡಿ, ಭೀಮಶ್ಯಾ ಬಮ್ಮನಹಳ್ಳಿ, ಶಶಿಧರ ಗಣಿಗಾರ, ಮಂಜುನಾಥ ಯಂಟಮನ, ಶಿವಕುಮಾರ ಮೇಲಿನಮನಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರವಿ ಬಿರಾದಾರ, ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ನಿರೀಕ್ಷಕ ಎಂ.ಎ.ಅತ್ತಾರ, ಶಿರಸ್ತೆದಾರ ಪಿ.ಎಸ್.ಮೂಕಿಹಾಳ, ಎಂ.ಎ.ಅವರಾದಿ, ತಾಲೂಕು ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ, ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಇಂಜಿನಿಯರ್ ಶ್ರೀಶೈಲ ಮಠಪತಿ, ಅಪ್ಪು ಶೆಟ್ಟಿ ನಿರೂಪಿಸಿದರು.

    ಗಮನ ಸೆಳೆದ ಸ್ತಬ್ಧಚಿತ್ರ
    ಸಂವಿಧಾನ ಜಾಗೃತಿ ಜಾಥಾ ರಥ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳ ನೇತೃತ್ವದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಪಟ್ಟಣದ ರಸ್ತೆಗಳನ್ನು ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಕುಂಭಹೊತ್ತ ಮಹಿಳೆಯರು, ಡೊಳ್ಳುವಾದನ, ಡಾಲ್ಬಿ, ಶಾಲಾ ಮಕ್ಕಳ ಕೋಲಾಟ ಹಾಗೂ ಭೀಮಜೋತಿ ಆಂಗ್ಲ ಮಾಧ್ಯಮ ಶಾಲೆ, ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ತಯಾರಿಸಿದ ಡಾ. ಅಂಬೇಡ್ಕರ್ ಅವರ ಸ್ತಬ್ಧಚಿತ್ರ ಗಮನ ಸೆಳೆಯಿತು. ಜಾಥಾ ರಥ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣ ಪಂಚಾಯಿತಿ ಆವರಣದಲ್ಲಿನ ಕಾರ್ಯಕ್ರಮ ವೇದಿಕೆಗೆ ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts