More

    ಸಂವಿಧಾನದಲ್ಲಿ ಪೌರತ್ವ, ಸಾರ್ವಭೌಮತೆ, ಮೂಲ ತತ್ವ ಅಡಗಿವೆ

    ಹೊಳೆನರಸೀಪುರ: ಭಾರತೀಯರ ಪೌರತ್ವ, ಸಾರ್ವಭೌಮತೆ ಹಾಗೂ ಮೂಲ ತತ್ವಗಳು ಅದ್ಭುತವಾಗಿ ರಚನೆಯಾಗಿರುವ ನಮ್ಮ ಸಂವಿಧಾನದಲ್ಲಿ ಅಡಗಿವೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ತಿಳಿಸಿದರು.


    ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವ ಮತ್ತು ಸಂವಿಧಾನ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.


    ನಮ್ಮ ದೇಶ ಸ್ವಾತಂತ್ರೃ ಪೂರ್ವದಲ್ಲಿ ಬ್ರಿಟಿಷರ ದಾಸ್ಯದಿಂದ ಬಹಳಷ್ಟು ನೋವು ಎದುರಿಸುತ್ತಿತ್ತು. ಈ ಪರಿಸ್ಥಿತಿಯನ್ನು ಅರಿತ ಸ್ವಾತಂತ್ರೃ ಹೋರಾಟಗಾರರು ಹಾಗೂ ದೇಶಾಭಿಮಾನಿಗಳು ತಮ್ಮ ಶ್ರಮವನ್ನು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಬಳಸುವುದರ ಮೂಲಕ ನಾವು ಬ್ರಿಟಿಷರ ದಬ್ಬಾಳಿಕೆಯಿಂದ ಹೊರಬರಲು ಸಾಧ್ಯವಾಯಿತು. ಸಂವಿಧಾನ ಕರ್ತೃ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನವನ್ನು ದೇಶಕ್ಕೆ ನೀಡಿದ ಹಾಗೂ ಜಾರಿ ಮಾಡಿದಂತಹ ದಿನವೂ ಇದಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.


    ವಿವಿಧ ಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತ್ತು ವೃತಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಆರ್. ಅನಂತಕುಮಾರ್, ಗೃಹರಕ್ಷಕ ಎಚ್.ಆರ್.ಪ್ರದೀಪ್, ಶಿಕ್ಷಕ ಶಿವಕುಮಾರಾಚಾರಿ, ಪತ್ರಕರ್ತ ರಾಮಕೃಷ್ಣ ಸೇರಿದಂತೆ ಹಲವರನ್ನು ಗಣ್ಯರು ಸನ್ಮಾನಿಸಿದರು.
    ಶಾಸಕ ಎಚ್.ಡಿ.ರೇವಣ್ಣ, ಪುರಸಭಾ ಅಧ್ಯಕ್ಷ ಜ್ಯೋತಿ, ಸದಸ್ಯರಾದ ಜಿ.ಕೆ.ಸುಧಾ ನಳಿನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಆರ್.ಗೋಪಾಲ್, ಕ್ಷೇತ್ರ ಶಿಕ್ಷಣ ಪ್ರಭಾರ ಅಧಿಕಾರಿ ಭಾಗ್ಯಮ್ಮ, ಕೃಷಿ ಅಧಿಕಾರಿ ಸಪ್ನಾ ಮತ್ತಿತರ ಗಣ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts