More

    ಸಂಭ್ರಮ ಕಸಿದ ಕರೊನಾ

    ಶಿಡ್ಲಘಟ್ಟ : ತಾಲೂಕಿನಲ್ಲಿ ರಂಜಾನ್ ಎಂದರೆ ಸದಾ ವಿಶೇಷವಾಗಿರುತ್ತದೆ. ಆದರೆ ಈ ಬಾರಿ ಕರೊನಾ ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

    ಪ್ರತೀ ವರ್ಷ ಈದ್ ಉಲ್ ಫಿತ್ರ್ ಗೆ ಭರ್ಜರಿ ತಯಾರಿ ನಡೆಸಲಾಗುತ್ತಿತ್ತು. ಮಸೀದಿ, ದರ್ಗಾಗಳು ಸಂಭ್ರಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿದ್ದವು. ಬಟ್ಟೆ, ಹಣ್ಣು, ಖರ್ಜೂರಗಳ ಅಂಗಡಿಗಳು ಮಸೀದಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದವು. ಖರೀದಿಯ ಭರಾಟೆಯಂತೂ ಹಬ್ಬದ ಹಿಂದಿನ ದಿನ ಮಧ್ಯರಾತ್ರಿಯವರೆಗೂ ಸಾಗಿರುತ್ತಿತ್ತು.ಈ ಬಾರಿ ಲಾಕ್‌ಡೌನ್ ಹಾಗೂ ನಿಷೇಧಾಜ್ಞೆ ಕಾರಣದಿಂದ ಭರ್ಜರಿ ವ್ಯಾಪಾರ ವಹಿವಾಟು ನಡೆಯಲಿಲ್ಲ. ಬಟ್ಟೆ ಖರೀದಿ ಹಾಗೂ ಇಫ್ತಾರ್ ಗೆ ಖರ್ಚು ಮಾಡುತ್ತಿದ್ದ ಹಣವನ್ನು ಬಡವರಿಗೆ ನೆರವಾಗಲು ಮತ್ತು ಕರೊನಾ ಪರಿಹಾರ ನಿಧಿಗೆ ನೀಡಲು ಬಹುಪಾಲು ಮಸೀದಿ ಮುಖಂಡರು ನಿರ್ಧರಿಸಿದ್ದಾರೆ. ಹಾಗಾಗಿ ಬಹುತೇಕರು ಹೊಸಬಟ್ಟೆ ಸಹ ಖರೀದಿಸದೇ ಸರಳವಾಗಿ ಹಬ್ಬ ಆಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts