More

    ಸಂಭ್ರಮದ ಮಹಾರಥೋತ್ಸವ

    ನರೇಗಲ್ಲ: ನರೇಗಲ್ಲನ ಕೋಡಿಕೊಪ್ಪದ ಹಠಯೋಗಿ ಶ್ರೀ ಹುಚ್ಚಿರೇಶ್ವರ ಮಹಾರಥೋತ್ಸವ ಮಂಗಳವಾರ ಸಂಜೆ ಭಕ್ತ ಸಾಗರದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.

    ಬೆಳಗ್ಗೆ 6ಗಂಟೆಗೆ ಕೃರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜೆ, ಮಂಗಳರಾತಿ ಸೇರಿ ವಿಶೇಷ ಪೂಜೆ ಜರುಗಿದವು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಿದ್ನೇಕೊಪ್ಪದಿಂದ ಭಜನೆ, ಡೂಳ್ಳು ಸೇರಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡುತ್ತಾ ತೇರಿನ ಹಗ್ಗ ತರಲಾಯಿತು. ಸಂಕನಗೌಡ್ರ ಮನೆಯಿಂದ ವೀರಪ್ಪಜ್ಜನ ಮಠದವರೆಗೆ ರಥದ ಕಳಸದ ಮೆರವಣಿಗೆ ಮಾಡಲಾಯಿತು. ಸಂಜೆ 6 ಗಂಟೆಗೆ ಹುಚ್ಚಿರೇಶ್ವರ ಮಹಾರಾಜ್ ಕೀ ಜೈ ಎಂಬ ಜೈಘೊಷಣೆಗಳೊಂದಿಗೆ ಭಕ್ತರು ಮಹಾರಥ ಎಳೆದು ಸಂಭ್ರಮಿಸಿದರು. ತೇರು ಬೇವಿನ ಗಿಡದ ಪಾದಗಟ್ಟಿವರೆಗೆ ತಲುಪಿ ಮೂಲ ಸ್ಥಳಕ್ಕೆ ಮರಳಿತು. ಮಹಿಳೆಯರ ಆರತಿ, ಕುಂಭ, ಡೊಳ್ಳು ಕುಣಿತ, ಭಜನೆ, ಮಜಲು ವಾದ್ಯಮೇಳಗೊಂದಿಗೆ ಆದ್ಧೂರಿಯಾಗಿ ಜರುಗಿತು.

    ಆಂಧ್ರ ಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಬೆಂಗಳೂರು, ಚಾಮರಾಜನಗರ, ಉಡುಪಿ, ಗದಗ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬಳ್ಳಾರಿ, ಹೊಸಪೇಟಿ, ಕೊಪ್ಪಳ, ಯಲಬುರ್ಗಾ, ಕುಕನೂರು, ಕರಮುಡಿ, ಹಾಲಕೆರೆ, ನಿಡಗುಂದಿ, ಗಜೇಂದ್ರಗಡ, ರಾಯಚೂರ, ಯಾದಗಿರಿ, ನರೇಗಲ್ಲ, ಅಬ್ಬಿಗೇರಿ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಕುರುಡಗಿ, ಯರೇಬೇಲೇರಿ, ಡ.ಸ. ಹಡಗಲಿ, ಗುಜಮಾಗಡಿ, ನಾಗರಾಳ, ತೋಡಿಹಾಳ, ಬಂಡಿಹಾಳ ಸೇರಿ ಸುತ್ತಲಿನ ಗ್ರಾಮಗಳ ಹದಿನೈದು ಸಾವಿರಕ್ಕೂ ಅಧಿಕ ಭಕ್ತರು ಅಜ್ಜನ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts