More

    ಸಂಭ್ರಮದ ಪಂ. ಪುಟ್ಟರಾಜರ ಜಯಂತ್ಯುತ್ಸವ

    ಗದಗ: ಗದಗ: ಅಂಧರ ಬಾಳಿನ ಬೆಳಕಾದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಜಯಂತ್ಯುತ್ಸವವನ್ನು ಗದಗ-ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

    ಜಯಂತ್ಯುತ್ಸವದ ನಿಮಿತ್ತ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಗದ್ದುಗೆಗೆ ಅಭಿಷೇಕ, ಪುಷ್ಪಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಗದಗ ಜಿಲ್ಲೆಯ ಸೇರಿದಂತೆ ಹಾವೇರಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

    ನಗರದ ವೀರೇಶ್ವರ ಪುಣ್ಯಾಶ್ರಮದಿಂದ ಆರಂಭವಾದ ಪುಟ್ಟರಾಜರ ಭಾವಚಿತ್ರವುಳ್ಳ ಭವ್ಯ ಮೆರವಣಿಗೆಯು ಭೂಮರಡ್ಡಿ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣ ವೃತ್ತ, ಮಹೇಂದ್ರಕರ ವೃತ್ತ, ಮಹಾತ್ಮಾ ಗಾಂಧಿ ವೃತ್ತ ಮಾರ್ಗವಾಗಿ ವೀರೇಶ್ವರ ಪುಣ್ಯಾಶ್ರಮದವರೆಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಕುಂಭ ಹೊತ್ತ ಮಹಿಳೆಯರು, ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ ಕೌತಾಳ, ವಿನೋದ ಸಿದ್ಲಿಂಗ್ ಮತ್ತಿತರರು ಇದ್ದರು.

    ಗದಗ ನಗರದ ಎಪಿಎಂಸಿಯ ನ್ಯೂ ಹಬೀಬ ಕ್ಯಾಂಟೀನ್ ಆವರಣದಲ್ಲಿ ಪಂ.ಪುಟ್ಟರಾಜ ಗವಾಯಿಗಳ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪರಶುರಾಮ ಹಬೀಬ, ವಿವೇಕಾನಂದ ಗುಡಿಮನಿ, ಮುತ್ತಣ್ಣ ಗುಡಿಮನಿ, ಮಹೇಶ ಪಾಟೀಲ, ದೀಪಕ ಹಬೀಬ, ಪ್ರಭು ಹಾಳಕೇರಿ, ಮಂಜು ಮಗ್ಗೆಣ್ಣವರ, ಸಿ.ಎ. ಹೂಗಾರ, ಗೊಬ್ಬರಗುಂಪಿ, ಅಮೃತ ಹಬೀಬ, ಅಕಾಶ ಹಬೀಬ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts