More

    ಸಂಬಳವಿಲ್ಲದೆ ಕರ್ಮಚಾರಿಗಳು ಅತಂತ್ರ

    ಮಾದನಹಿಪ್ಪರಗಿ: ಸಮರ್ಪಕವಾಗಿ ಸಂಬಳ ನೀಡದಿರುವುದರಿಂದ ವಾರದಿಂದ ಸಫಾಯಿ ಕರ್ಮಚಾರಿಗಳು ಕೆಲಸ ಮಾಡುತ್ತಿಲ್ಲ. ಇದರಿಂದ ಇಡೀ ಗ್ರಾಮ ಗಬ್ಬೆದ್ದು ನಾರುತ್ತಿದೆ.
    ಗ್ರಾಮ ಪಂಚಾಯಿತಿಯಲ್ಲಿ 18 ಸಿಬ್ಬಂದಿಗಳಿದ್ದು, 9 ಜನ ಕಾಯಂ ನೌಕರರಾಗಿದ್ದಾರೆ. ಇನ್ನುಳಿದ 9 ಜನರನ್ನು ಗ್ರಾಮ ಪಂಚಾಯಿತಿ ನೇಮಕ ಮಾಡಿಕೊಂಡಿದ್ದು, ಇವರಿಗೆ ಕರ ವಸೂಲಿ ಮಾಡಿ ಸಂಬಳ ನೀಡಲಾಗುತ್ತದೆ. ಆದರೆ ಇವರಿಗೆ ಕಳೆದ 10 ತಿಂಗಳಿಂದ ನಯಾ ಪೈಸೆ ಸಂಬಳ ನೀಡಿಲ್ಲ. ಇದರಿಂದ ಜೀವನ ನಡೆಸುವುದೆ ದುಸ್ತರವಾಗಿದೆ.
    ಕಾಯಂ ನೌಕರರಿಗೆ ಸಕರ್ಾರ ಸಂಬಳ ನೀಡುತ್ತಿದ್ದು, ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಕಸಗುಡಿಸುವವರು, ನೀರು ಬಿಡುವವರು, ಬೀದಿ ಲೈಟ್ಗಳ ನಿರ್ವಹಣೆ ಮಾಡುವುದು, ಕಸದ ಗಾಡಿ ನಿರ್ವಹಿಸುವವರು ಹಾಗೂ ಓರ್ವ ಚಾಲಕನಿಗೆ ಗ್ರಾಮ ಪಂಚಾಯಿತಿ ಸಂಬಳ ನೀಡಿಲ್ಲ. ಈ ಬಗ್ಗೆ ಕೇಳಿದರೆ ಅನುದಾನವಿಲ್ಲ ಎಂಬ ಉತ್ತರ ಹೇಳುತ್ತಿದ್ದಾರೆ.
    ಇದೀಗ ಕರೊನಾದಿಂದಾಗಿ ಇಡೀ ದೇಶ ಲಾಕ್ಡೌನ್ ಮಾಡಲಾಗಿದ್ದು. ಪ್ರತಿಯೊಬ್ಬರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ ಕಳೆದ 10 ತಿಂಗಳಿಂದ ಸಂಬಳ ನೀಡದಿದ್ದರೆ ನಾವು ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ ಎಂಬುದು ನೌಕರರ ಪ್ರಶ್ನೆಯಾಗಿದೆ.ಒಟ್ಟಾರೆ ಗ್ರಾಮ ಪಂಚಾಯಿತಿ ಹಾಗೂ ನೌಕರರ ಗುದ್ದಾಟದಲ್ಲಿ ಗ್ರಾಮದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಜನತೆ ಸಾಂಕ್ರಾಮಿಕ ಕಾಯಿಲೆಯ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಂಬಂಧಿತರು ಗಮನಹರಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

    ನಾನು ಇತ್ತೀಚೆಗಷ್ಟೆ ಪಂಚಾಯಿತಿಯ ಅಧಿಕಾರ ವಹಿಸಿಕೊಂಡಿದ್ದೇನೆ. ಪಂಚಾಯತ್ ಆಡಳಿತ ವ್ಯವಸ್ಥೆ ಕರವಸೂಲಿ ಮಾಡಿ ಸಂಬಳ ನೀಡಬೇಕಿತ್ತು. ಈ ಕೆಲಸವಾಗಿಲ್ಲ. ಆದರೆ ಕರೊನಾದಿಂದಾಗಿ ಕರವಸೂಲಿ ಮಾಡಲು ಸಾಧ್ಯವಾಗಿಲ್ಲ. ಆದರೂ ಪಂಚಾಯಿತಿಯ ಇತರೆ ಖಚರ್ಿನಲ್ಲಿ ಸ್ವಲ್ಪವಾದರೂ ಸಂಬಳ ನೀಡಲು ಕ್ರಮ ಕೈಗೊಳ್ಳಲಾಗುವುದು.
    | ರಮೇಶ ಪ್ಯಾಟಿ, ಪಿಡಿಒ, ಮಾದನಹಿಪ್ಪರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts