More

    ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಿ

    ಗಜೇಂದ್ರಗಡ: ಸಂಚಾರ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅಪಘಾತಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅಪಘಾತಗಳನ್ನು ತಡೆಯೋಣ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

    ಜಿಲ್ಲಾ ಪೊಲೀಸ್ ಇಲಾಖೆ, ನರಗುಂದ ಉಪ ವಿಭಾಗ, ರೋಣ ವೃತ್ತ, ಸ್ಥಳೀಯ ಪೊಲೀಸ್ ಇಲಾಖೆ ಮತ್ತು ಇಲ್ಲಿನ ಆಟೋ ಚಾಲಕರ ಸಹಯೋಗದಲ್ಲಿ ಮಂಗಳವಾರ ಪುರಸಭೆಯಿಂದ ಆರಂಭವಾದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಅತಿ ವೇಗದ ಚಾಲನೆ, ಕುಡಿದು ವಾಹನ ಓಡಿಸುವುದು, ಸೂಕ್ತ ತರಬೇತಿ ಕೊರತೆ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇರುವುದು ಹಾಗೂ ವಾಹನ ದುಸ್ಥಿತಿ ಮತ್ತು ರಸ್ತೆ ಮೇಲೆ ಉಡಾಫೆಯಿಂದ ವಾಹನ ಚಾಲನೆಯಿಂದ ಜೀವ ಹಾನಿ ಸಂಭವಿಸುತ್ತದೆ. ಸುರಕ್ಷಿತ ಪ್ರಯಾಣ ನಮ್ಮದಾಗಬೇಕಾದರೆ ಸಂಚಾರಿ ನಿಯಮಗಳ ಪಾಲನೆ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.

    ಪಿಎಸ್​ಐ ಗುರುಶಾಂತ ದಾಶ್ಯಾಳ ಮಾತನಾಡಿ, ಸಂಚಾರಿ ನಿಯಮಗಳ ಪಾಲನೆ ಮಾಡುವ ಮೂಲಕ ‘ಅಪಘಾತ ರಹಿತ ಸಂಚಾರ’ದಲ್ಲಿ ಭಾಗವಹಿಸುವ ಪ್ರತಿಜ್ಞೆ ಮಾಡೋಣ ಎಂದರು.

    ನೂರಾರು ವಿದ್ಯಾರ್ಥಿಗಳ ಜಾಥಾದಲ್ಲಿ ಭಾಗವಹಿಸಿದ್ದರು. ಮೈಸೂರು ಮಠ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ ಮಾರ್ಗವಾಗಿ ಜಾಥಾ ಕಾಲಕಾಲೇಶ್ವರ ವೃತ್ತ ತಲುಪಿತು. ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೆ.ಜೆ. ಕುದರಿ ಹಾಗೂ ಉಪನ್ಯಾಸಕ ಅರವಿಂದ ವಡ್ಡರ ನೇತೃತ್ವ ವಹಿಸಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts