More

    ಸಂಚಾರಕ್ಕೆ ರಸ್ತೆ ವ್ಯಾಪಾರ ಕಂಟಕ

    ಚಂದ್ರಶೇಖರ ಎಮ್ಮೆ ಭಾಲ್ಕಿ
    ಪಟ್ಟಣದ ಬಸ್ ನಿಲ್ದಾಣದಿಂದ ನಗರ ಪೊಲೀಸ್ ಠಾಣೆಗೆ ಸಂಪಕರ್ಿಸುವ ಮುಖ್ಯರಸ್ತೆಯನ್ನೇ ವ್ಯಾಪಾರಿಗಳು ತರಕಾರಿ ಮಾರಾಟದ ಜಾಗ ಮಾಡಿಕೊಂಡಿದ್ದು, ಪದೇಪದೆ ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಇನ್ನಿಲ್ಲದ ಸಂಕಟ ಎದುರಿಸುವಂತಾಗಿದೆ.

    ದಶಕಗಳ ಹಿಂದೆ ಐತಿಹಾಸಿಕ ಕೋಟೆ ಹಿಂಬದಿಯಲ್ಲಿ ಶನಿವಾರದ ಸಂತೆ ನಡೆಯುತ್ತಿತ್ತು. ಸುತ್ತಮುತ್ತಲಿನ ರೈತರು ತಮ್ಮ ತರಕಾರಿಗಳನ್ನು ತಂದು ಮಾರಾಟ ಮಾಡಿ ಊರುಗಳಿಗೆ ಹಿಂತಿರುಗುತ್ತಿದ್ದರು. ಆದರೀಗ ಈ ಜಾಗದಲ್ಲಿದ್ದ ಸಂತೆ ಮಾಯವಾಗಿದ್ದು, ತರಕಾರಿ ಮಾರುಕಟ್ಟೆಯನ್ನು ವರ್ತಕರು ಬಸ್ ನಿಲ್ದಾಣ-ನಗರ ಠಾಣೆ ರಸ್ತೆಗೆ ಶಿಫ್ಟ್ ಮಾಡಿಕೊಂಡಿದ್ದಾರೆ. ಮೊದಲೇ ಇಕ್ಕಟ್ಟಾದ ಈ ಮಾರ್ಗದ ಎರಡೂ ಬದಿಗೆ ತರಕಾರಿ ಖರೀದಿ-ಮಾರಾಟ ನಡೆಯುತ್ತಿರುವುದರಿಂದ ಬೆಳಗ್ಗೆಯಿಂದ ಸಂಜೆವರೆಗೆ ದಟ್ಟಣೆಯಿಂದ ಕೂಡಿರುತ್ತದೆ. ಇಂಥದರಲ್ಲಿ ವಾಹನಗಳೇಕೆ, ಜನ ನಡೆದಾಡಲು ಸಹ ಪ್ರಯಾಸ ಪಡುವಂಥ ಸನ್ನಿವೇಶ ಸೃಷ್ಟಿಯಾಗಿದೆ.

    ಇನ್ನು ರೈತರು ತಮ್ಮ ತರಕಾರಿ ಉತ್ಪನ್ನಗಳನ್ನು ಸಂತೆಗೆ ನಿದರ್ಿಷ್ಟ ಜಾಗ ಇಲ್ಲವಾಗಿದ್ದರಿಂದ ಅನಿವಾರ್ಯವಾಗಿ ಮಾರುಕಟ್ಟೆಗೆ (ತರಕಾರಿ ಅಡತ್) ಬಜಾರ್ಗೆ ಸಾಗಿಸುತ್ತಿದ್ದಾರೆ. ಇಲ್ಲಿ ವ್ಯಾಪಾರಿಗಳು ಮನಸ್ಸಿಗೆ ಬಂದಂತೆ ರೈತರಿಗೆ ಹಣ ಕೊಟ್ಟು ತಾಜಾ ತರಕಾರಿ ಖರೀದಿಸಿ ಹೆಚ್ಚಿನ ಬೆಲೆಯಲ್ಲಿ ಗ್ರಾಹಕರಿಗೆ ಕೊಡಮಾಡುತ್ತಿದ್ದಾರೆ. ಇದರಿಂದ ಬೆವರು ಸುರಿಸಿ ಬೆಳೆದ ರೈತರು ವ್ಯಾಪಾರಿಗಳು ನೀಡಿದಷ್ಟು ಹಣ ಪಡೆದು ಸಿಕ್ಕಷ್ಟು ಶಿವಾಯ.. ಎನ್ನುತ್ತ ಸಪ್ಪೆ ಮುಖದಲ್ಲಿ ವಾಪಸಾದರೆ, ವ್ಯಾಪಾರಿಗಳು ಮಾತ್ರ ತಮಗೆ ತೋಚಿದಂತೆ ರೇಟ್ ಫಿಕ್ಸ್ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

    ನಾನಾ ಕಾರಣಗಳಿಂದ ಮೊದಲೇ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಇತ್ತೀಚಿನ ನಿರಂತರ ಮಳೆ ಮತ್ತಷ್ಟು ಹೈರಾಣಕ್ಕೆ ಸಿಲುಕುವಂತೆ ಮಾಡಿದೆ. ಅನ್ನದಾತರ ಸಂಕಷ್ಟ ಅರಿತು ಪುರಸಭೆಯವರು ಸ್ಥಗಿತಗೊಂಡಿದ್ದ ಶನಿವಾರದ ಸಂತೆಗೆ ನಿದರ್ಿಷ್ಟ ಜಾಗ ಒದಗಿಸಿದರೆ ಟ್ರಾಫಿಕ್ ಜಾಮ್ ಸಮಸ್ಯೆಗೆ ಇತಿಶ್ರೀ ಹಾಡಬಹುದಾಗಿದೆ. ಇನ್ನೊಂದೆಡೆ ರೈತರು ತಮ್ಮ ಉತ್ಪನ್ನಗಳನ್ನು ಮಧ್ಯವತರ್ಿಗಳಿಲ್ಲದೆ ನೇರವಾಗಿ ಸಂತೆಗೆ ತಂದು ಮಾರಾಟ ಮಾಡಿ ನೆಮ್ಮದಿ ಭಾವದೊಂದಿಗೆ ಮರಳಲು ಅನುಕೂಲವಾಗಲಿದೆ.

    ಜೆಸ್ಕಾಂ ಸುತ್ತುಗೋಡೆಗೆ ಹೊಂದಿಕೊಂಡು ಮತ್ತು ಹಳೆಯ ಸವರ್ಿಸ್ ಸಾ್ಟೃಂಡ್ ಹತ್ತಿರದ ಸಂಪೂರ್ಣ ಜಾಗವನ್ನು ತರಕಾರಿ ಮಾರಾಟಗಾರರು ಕಬ್ಜಾ ಮಾಡಿಕೊಂಡು ರಾಜಾರೋಷವಾಗಿ ವಹಿವಾಟು ನಡೆಸುತ್ತಿದ್ದಾರೆ. ಇನ್ನು ಪುರಸಭೆ ಹಿಂಬದಿಯಲ್ಲಿ ಲಭ್ಯವಿರುವ ವಿಶಾಲವಾದ ಸಕರ್ಾರಿ ಜಾಗಕ್ಕೆ ಈ ಮಾರುಕಟ್ಟೆ ಸ್ಥಳಾಂತರಿಸಿದರೆ ಸಂಚಾರ ಸಮಸ್ಯೆ ಕೊನೆಗಾಣಲಿದೆ. ಈ ವಿಷಯದತ್ತ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಏಕೆ ಗಮನಹರಿಸಿ ದಿಟ್ಟ ಹೆಜ್ಜೆ ಇರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಹಳೆಯದು ಮಾಯ, ಹೊಸದಾಗಿ ಉದಯ: ದಶಕಗಳ ಹಿಂದೆ ಐತಿಹಾಸಿಕ ಕೋಟೆ ಹಿಂಬದಿಯಲ್ಲಿ ಶನಿವಾರದ ಸಂತೆ ನಡೆಯುತ್ತಿತ್ತು. ನಿದರ್ಿಷ್ಟ ಕಾರಣ ತಿಳಿಯದಿದ್ದರೂ ಈ ಸಂತೆ ಸ್ಥಗಿತಗೊಂಡು ಸಾಕಷ್ಟು ವರ್ಷಗಳಾಗಿವೆ. ಖಾನಾಪುರ ಗ್ರಾಮದಲ್ಲಿ ಭಾನುವಾರ ಸಂತೆ ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಇಲ್ಲೇಕೆ ಇಲ್ಲ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರ ಇಲ್ಲವಾಗಿದೆ. ಇನ್ನು ಶನಿವಾರದ ಸಂತೆ ಭಾಲ್ಕಿ ಸುತ್ತಲಿನ 5-10 ಕಿಮೀ ಅಂತರದಲ್ಲಿರುವ ಹಳ್ಳಿ ರೈತರಿಗೆ ಬಹಳ ಉಪಯುಕ್ತವಾಗಿತ್ತು. ಅವರು ತಮ್ಮ ಉತ್ಪನ್ನಗಳನ್ನು ಇಲ್ಲಿಗೆ ತಂದು ಮಾರಾಟ ಮಾಡಿ ಶ್ರಮಕ್ಕೆ ತಕ್ಕ ಆದಾಯ ಪಡೆಯುತ್ತಿದ್ದರು. ಆದರೆ ಈ ಸಂತೆ ಕಣ್ಮರೆಯಾದ ಬಳಿಕ ಮುಖ್ಯ ರಸ್ತೆಗೆ ಮಾರುಕಟ್ಟೆ ಸ್ಥಳಾಂತರಗೊಂಡ ಬಳಿಕ ಅವರು ಸಂಕಟ ಎದುರಿಸುವಂತಾಗಿದೆ. ಒಲ್ಲದ ಮನಸ್ಸಿನಿಂದ ತರಕಾರಿ ಬಜಾರ್ಗೆ ತಂದು ವರ್ತಕರು ಫಿಕ್ಸ್ ಮಾಡಿದ ರೇಟ್ಗೆ ಕೊಟ್ಟು ಮರಳಬೇಕಿದೆ.

    ಪಟ್ಟಣದಲ್ಲಿ ಶನಿವಾರ ಸಂತೆ ಎಂದರೆ ಹಬ್ಬದ ವಾತಾವರಣ ಕಾಣುತ್ತಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಈ ಸಂತೆ ಬಂದ್ ಆಗಿದೆ. ಸಂಬಂಧಿತರು ತಾಲೂಕಿನಾದ್ಯಂತ ಡಂಗೂರ ಸಾರಿ ಪಟ್ಟಣದಲ್ಲಿ ಶನಿವಾರ ಸಂತೆ ಮತ್ತೆ ಪ್ರಾರಂಭಿಸಿದರೆ ರೈತರ ಜತೆಗೆ ಜನಸಾಮಾನ್ಯರಿಗೂ ಕನಿಷ್ಠ ಬೆಲೆಯಲ್ಲಿ ತಾಜಾ ತರಕಾರಿ ಸಿಗುವಂತಾಗಲಿದೆ.
    | ಚಂದ್ರಕಾಂತ ವಂಕೆ, ವ್ಯಾಪಾರಿ

    ಚಿಕ್ಕವರಾಗಿದ್ದಾಗ ಕೋಟೆ ಹಿಂಬದಿಯಲ್ಲಿ ಶನಿವಾರ ಸಂತೆ ನಡೆಯುತ್ತಿತ್ತು. ಇಲ್ಲಿ ಗ್ರಾಮೀಣ ಭಾಗದ ಸಣ್ಣಪುಟ್ಟ ರೈತರು ತಾಜಾ ತರಕಾರಿ ಮಾರಾಟ ಮಾಡುತ್ತಿದ್ದರು. ಆದರೆ ಏಕೆ ಸ್ಥಗಿತವಾಗಿದೆ ಎಂಬುದು ಗೊತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿ ಮತ್ತು ಸಂಬಂಧಿತರ ಜತೆ ಚಚರ್ಿಸಿ ಆದಷ್ಟು ಬೇಗ ಶನಿವಾರ ಸಂತೆ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
    | ಅನೀಲಕುಮಾರ ಸುಂಟೆ, ಪುರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts