More

    ಸಂಘದ ಅಭಿವೃದ್ಧಿಗೆ ಸಹಕರಿಸಿ

    ಹುಕ್ಕೇರಿ: ವಿದ್ಯುತ್ ಸಹಕಾರಿ ಸಂಘದ ಕಟಬಾಕಿದಾರರು ಇತ್ತೀಚೆಗೆ ಹುಕ್ಕೇರಿ ನ್ಯಾಯಾಲಯದಲ್ಲಿ ಜರುಗಿದ ಲೋಕ ಅದಾಲತ್‌ನಲ್ಲಿ ಹಾಜರಾಗಿ 40 ಲಕ್ಷ ರೂ. ಬಾಕಿ ಬಿಲ್ ಸಂದಾಯ ಮಾಡಿದ್ದಾರೆ. ಬಾಕಿ ಉಳಿಸಿಕೊಂಡ ಇನ್ನುಳಿದ ಸದಸ್ಯರು ತಮ್ಮ ಬಾಕಿ ಹಣ ತುಂಬಿ ಸಂಘದ ಅಭಿವದ್ಧಿಗೆ ಸಹಕರಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ತಾಲೂಕಿನ ಆಲೂರ ಕೆ.ಎಂ. ಗ್ರಾಮದ 63 ಕ.ವಿ. ಹೆಚ್ಚುವರಿ ಟಿಸಿ ಉದ್ಘಾಟಿಸಿ ಮಾತನಾಡಿ, ಸಂಘದ ಬಹಳಷ್ಟು ಗ್ರಾಹಕರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ಸಂಘಕ್ಕೆ ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ. ಸದಸ್ಯರು ತಮ್ಮ ಬಾಕಿ ಮೊತ್ತವನ್ನು ಆದಷ್ಟು ಬೇಗ ತುಂಬುವಂತೆ ವಿನಂತಿಸಿದರು. ರೈತರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಸಂಘ ಯಾವತ್ತೂ ಸಹಕರಿಸುತ್ತಿದೆ. ಆದರೆ, ಕೆಲ ರೈತರು ಅಕ್ರಮ ಸಂಪರ್ಕದ ಮೂಲಕ ವಿದ್ಯುತ್ ಪಡೆಯುವುದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದರು. ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ, ಶಾಖಾಧಿಕಾರಿ ಉದಯಕುಮಾರ ಮಗದುಮ್ಮ, ಹಿರಾ ಶುಗರ್ಸ್‌ ನಿರ್ದೇಶಕ ಅಜ್ಜಪ್ಪ ಕಲ್ಲಟ್ಟಿ, ಜಿ.ಪಂ. ಮಾಜಿ ಸದಸ್ಯ ಮಹೇಶ ಕುಂಬಾರ, ಅಶೋಕ ಹಿರೇಕೋಡಿ, ಮಹಾಲಿಂಗ ಮಗದುಮ್ಮ, ಮಲ್ಲಪ್ಪ ಶೆಟ್ಟೆನ್ನವರ,ಪರಶುರಾಮ ಪಾಟೀಲ, ವೀರಗೌಡ ಪಾಟೀಲ, ಬಸವಣ್ಣಿ ಖಾನಾಪುರೆ, ಅಪ್ಪಣ್ಣ ಬೆಳವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts