More

    ಸಂಘಟಿತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ


    ಗದಗ: ಸಂಘದಲ್ಲಿ ಶಕ್ತಿಯಿದೆ. ಸಂಘಟಿತ ಪ್ರಯತ್ನದಿಂದ ಗುರಿ ಮುಟ್ಟಬಹುದು. ಸಂಘ ಶಕ್ತಿಯಿಂದ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೀಮಠದ ಲಿಂಗಾಯತ ಪ್ರಗತಿಶೀಲ ಸಂಘವೇ ಉದಾಹರಣೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಿಂಗಾಯತ ಪ್ರಗತಿಶೀಲ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಕ್ರಿಯಾಶೀಲ ಯುವಕರು ಕಟ್ಟಿದ ಸಂಸ್ಥೆ ಜನಮಾನಸದಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಬಿತ್ತುವ ಹಾಗೂ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಮಹೋನ್ನತ ಕಾರ್ಯ ಮಾಡುತ್ತಿದೆ. ಶ್ರಮ, ಬದ್ಧತೆ, ಸೇವಾ ಮನೋಭಾವದ ಪ್ರತೀಕವಾಗಿರುವ ಸಂಘ ಉತ್ತಮ ಸಮಾಜಕ್ಕಾಗಿ ಧರ್ಮ ಜಾಗೃತಿ, ಕೋಮು ಸೌಹಾರ್ದತೆಗಾಗಿ ಉತ್ತಮ ಕಾರ್ಯ ಮಾಡಿದೆ ಎಂದರು.

    ಸಮ್ಮುಖ ವಹಿಸಿದ್ದ ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕಲ್ಯಾಣದಲ್ಲಿ ಬಸವಣ್ಣ ಸಮಸಮಾಜಕ್ಕೆ ಶ್ರಮಿಸಿದ ಹಾಗೆ ತೋಂಟದ ಸಿದ್ಧಲಿಂಗ ಶ್ರೀಗಳು ಶಿವಾನುಭವದ ಮೂಲಕ ಸಾಮರಸ್ಯದ ಬದುಕಿಗೆ ಮುನ್ನುಡಿ ಬರೆದರು. ಶ್ರೀಗಳ ಆಶಯಕ್ಕೆ ಪೂರಕವಾಗಿ ಸಂಘ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿಯಾಗಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೀದರ ಬಸವ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕೆ ಅಕ್ಕನವರು, ಶರಣರ ವಿಚಾರಧಾರೆಗಳನ್ನು 50 ವರ್ಷ ಗಳಿಂದ ಜನಮಾನಸಕ್ಕೆ ತಲುಪಿಸುವ ಕಾಯಕ ಮಾಡು ತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದರು.

    ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, 1972ರಿಂದ ಸತತವಾಗಿ ಶಿವಾನುಭವ ನಡೆಸಿಕೊಂಡು ಬಂದ ಕೀರ್ತಿ ಸಂಘದ್ದಾಗಿದೆ. ಸಂಘ ನಡೆಸುತ್ತಿದ್ದ ಶಿವಾನುಭವದಿಂದಲೇ ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಠಕ್ಕೆ ಬರಲು ಕಾರಣವಾಯಿತು ಎಂದ ಹೇಳಿದರು.

    ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ನಾಡಿನ ಎಲ್ಲ ದಿಗ್ಗಜರು ಶ್ರೀ ಮಠದ ಶಿವಾನುಭವ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಸಂಘ ಆಯೋಜಿಸುತ್ತ ಬಂದಿರುವ ಶಿವಾನುಭವಗಳು ಗಿನ್ನಿಸ್ ದಾಖಲೆಗೆ ಅರ್ಹವಾಗಿದೆ ಎಂದು ಹೇಳಿದರು.

    ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ನಿಜಗುಣೆಪ್ಪ ಪಟ್ಟಣಶೆಟ್ಟಿ ಮಾತನಾಡಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಸಂಘದ ಮಾಜಿ ಅಧ್ಯಕ್ಷರಾದ ಮಹೇಶ್ವರಗೌಡ ಪೊಲೀಸ್​ಪಾಟೀಲ, ಶಿವಣ್ಣ ಇಟಗಿ, ಮಹಾಂತಣ್ಣ ಬಡ್ನಿ, ವೀರಣ್ಣ ಬೇವಿನಮರದ ಉಪಸ್ಥಿತರಿದ್ದರು.

    ಸವಿತಾ ಕುಪ್ಪಸದ ಅವರಿಂದ ವಚನ ಸಂಗೀತ, ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ತಂಡದಿಂದ ವಚನನೃತ್ಯ ಹಾಗೂ ಜಾನಪದ ನೃತ್ಯ ಜರುಗಿತು. ಪ್ರಭಾವತಿ ಶಿವಣ್ಣ ಚಿತಾಪೂರ ಧರ್ಮಗ್ರಂಥ ಪಠಣ, ಶಿವಣ್ಣ ಚಿತಾಪೂರ ವಚನ ಚಿಂತನೆ ನೆರವೇರಿಸಿದರು. ಸಂಘದ ಚೇರ್ಮನ್ ಸಂಗಮೇಶ ದುಂದೂರ, ಗೌರಕ್ಕ ಬಡಿಗಣ್ಣವರ, ಶಶಿಧರ ಬೀರನೂರ, ಡಾ. ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಪ್ರಕಾಶ ಅಸುಂಡಿ, ವೀರಣ್ಣ ಗೊಡಚಿ, ಶರಣೆ ಕಲ್ಯಾಣಮ್ಮ, ರತ್ನಕ್ಕ ಪಾಟೀಲ, ಗಂಗಣ್ಣ ಕೋಟಿ, ಎಸ್.ಎಂ. ವಾಲಿ, ದಾನಪ್ಪ ತಡಸದ, ಸಿದ್ದಣ್ಣ ಬಂಗಾರಶೆಟ್ಟರ್, ಮೃತ್ಯುಂಜಯ ಸಂಕೇಶ್ವರ, ಸಂಗಪ್ಪ ಪಡೇಸೂರ, ವೀರಣ್ಣ ಮುಳ್ಳಾಳ, ಇತರರು ಇದ್ದರು. ವಿವೇಕಾನಂದಗೌಡ ಪಾಟೀಲ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ನಿರ್ವಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts