More

    ಸಂಗೀತ ಪರಂಪರೆ ಬೆಳೆಸುತ್ತಿರುವುದು ಶ್ಲಾಘನೀಯ

    ಬೆಳಗಾವಿ: ಸಂಗೀತಕ್ಕೆ ದೊಡ್ಡ ಪರಂಪರೆಯಿದೆ. ಜಿಲ್ಲೆಯಲ್ಲಿ ಈ ಪರಂಪರೆ ಬೆಳೆಸುತ್ತಿರುವುದು ಸಂತೋಷದ ಸಂಗತಿ ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.

    ಶಿವಬಸವ ನಗರದ ಭಾರತೀಯ ಗಾಯನ ಸಮಾಜ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಸಂಗೀತ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಅನುಭಾವಿಗಳು ಕಟ್ಟಿಕೊಟ್ಟ ದೈವಿಕ ಸಂಗೀತವು ಮಾನವನ ಅಂತರಂಗ ಬದಲಿಸುತ್ತದೆ. ಅವನನ್ನು ದೈವತ್ವಕ್ಕೇರಿಸುವ ಶಕ್ತಿ ಸಂಗೀತಕ್ಕೆ ಮಾತ್ರವಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಪಂ.ಪುಟ್ಟರಾಜ ಗವಾಯಿ ಅವರ ಸ್ಮರಣೆ ಸಂಗೀತಗಾರರಿಗೆ ದಿವ್ಯಮಂತ್ರ. ಸಂಗೀತವಿದ್ದಲ್ಲಿ ಪೂಜ್ಯ ಪುಟ್ಟರಾಜ ಗವಾಯಿಗಳ ಆತ್ಮ ಪರಮಾತ್ಮನ ಸ್ವರೂಪದಲ್ಲಿರುತ್ತದೆ. ಪುಟ್ಟರಾಜ ಗವಾಯಿಗಳು ಹಾನಗಲ್ಲ ಕುಮಾರಸ್ವಾಮಿ ಅವರ ಮಾನಸ ಪುತ್ರರು. ಸಾವಿರಾರು ಸಂಗೀತಗಾರರನ್ನು ತಯಾರು ಮಾಡಿದ್ದಾರೆ. ಅವರ ವೀರೇಶ್ವರ ಪುಣ್ಯಾಶ್ರಮವು ಸಾವಿರಾರು ಅಂಧ ಕಲಾವಿದರಿಗೆ ಬದುಕು ಕೊಟ್ಟ ನೆಲೆಯಾಗಿದೆ. ಅಂತಹ ಮಹಾತ್ಮರ ಸ್ಮರಣೆಯಿಂದ ನಗರವು ಪಾವನವಾಗಿದೆ ಎಂದರು.

    ಗಂದಿಗವಾಡದ ಮೃತ್ಯುಂಜಯ ಸ್ವಾಮಿ ಹಿರೇಮಠ ಮಾತನಾಡಿ, ಸಂಗೀತ ಎನ್ನುವುದು ನಿಸರ್ಗದ ಭಾಷೆಯಾಗಿದೆ. ಜಗದ ಸಕಲ ಜೀವಿಗಳಿಗೆ ಸಂಗೀತದೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ನಂಟಿದೆ. ಸಂಗೀತ ಮತ್ತು ಅನುಭಾವ ಈ ಎರಡು ಸಂಗತಿಗಳು ಆಧ್ಯಾತ್ಮ ಎತ್ತರಕ್ಕೊಯ್ಯುತ್ತವೆ ಎಂದರು.

    ಸಂಗೀತ ಶಿವಾನುಭವದಲ್ಲಿ ಡಾ. ರೋಹಿಣಿ ಗಂಗಾಧರ ಹಾಗೂ ಭಾರತೀಯ ಗಾಯನ ಸಮಾಜದ ಮಕ್ಕಳು ವಚನ ಗಾಯನ ನಡೆಸಿಕೊಟ್ಟರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಬೆಳಗಾವಿ ನಗರದ ಸಂಚಾಲಕಿ ಗಿರಿಜಾ ಮುಳಗುಂದ ಅಧ್ಯಕ್ಷತೆ ವಹಿಸಿದ್ದರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಹಾವಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಯಮಕನಮರಡಿ ನಿರೂಪಿಸಿದರು. ಡಾ. ಹೇಮಾವತಿ ಸೋನಳ್ಳಿ ವಂದಿಸಿದರು. ಇದೇ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ, ಪ್ರೊ.ಎಸ್.ಎಂ.ಗಂಗಾಧರಯ್ಯ, ಎಂ. ವೈ. ಮೆಣಸಿನಕಾಯಿ, ಸುರೇಶ ಹಂಜಿ, ರೇಖಾ ಹೂಗಾರ, ರತ್ನಪ್ರಭಾ ಬೆಲ್ಲದ, ಶೈಲಜಾ ಭಿಂಗೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts