More

    ಸಂಗೀತದ ನಿನಾದ, ಮೇಳೈಸಿದ ಸಂಭ್ರಮ

    ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ‘ಯುವ ಸಂಭ್ರಮ’ದಲ್ಲಿ ಸಂಗೀತದ ನಿನಾದ ಮತ್ತು ಗೆಜ್ಜೆಮೇಳವೇ ಮೇಳೈಸಿತು.

    ಸಮೂಹ ನೃತ್ಯ ಮೇಳ ಗಮನ ಸೆಳೆದರೆ, ಇದಕ್ಕೆ ವೈವಿಧ್ಯಮಯ ಹಾಡು-ಸಂಗೀತದ ಹಿಮ್ಮೇಳ ಆಕರ್ಷಿಸಿತು. ನರ್ತನಕ್ಕಿಂತ ಮನತಟ್ಟಿದ ಸಂಗೀತಕ್ಕೆ ಮನಸೋತ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.
    ಕನಕಪುರದ ಆದಿತ್ಯಾಸ್ ಪದವಿಪೂರ್ವ ಕಾಲೇಜಿನ ತಂಡದವರು ಭಾರತ ಸ್ವಾತಂತ್ರೃ ಚಳವಳಿಗೆ ಕರ್ನಾಟಕದ ಕೊಡುಗೆಯನ್ನು ನೃತ್ಯರೂಪಕದ ಮೂಲಕ ಸೊಗಸಾಗಿ ಪ್ರಸ್ತುತಪಡಿಸಿದರು.

    ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಪರಿಸರ ಸಂರಕ್ಷಣೆಯನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು. ಶ್ರೀರಂಗಪಟ್ಟಣದ ಪರಿವರ್ತನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಮತ್ತು ಸಂಸ್ಕೃತಿ, ಜಾನಪದ ಕಲೆಯನ್ನು ಮತ್ತು ಪಾಂಡವರಪುರದ ವಿಜಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ಕಲೆಯನ್ನು ಪ್ರದರ್ಶಿಸಿದರು.


    ಜೆಎಸ್‌ಎಸ್ ಸಹನಾ ವಿಶೇಷ ಶಿಕ್ಷಣ ಶಾಲೆಯ ಮಕ್ಕಳು ವಿಷ್ಣು ದಶಾವತಾರವನ್ನು ವರ್ಣರಂಜಿತವಾಗಿ ಪ್ರಸ್ತುತಪಡಿಸಿದರು. ಜಲಪುರಿಯ ಪೊಲೀಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ, ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನವರು ಜಾನಪದ ಕಲೆಯನ್ನು ಸಂಗೀತ, ನರ್ತನದ ಮೂಲಕ ಅನಾವರಣಗೊಳಿಸಿದರು.

    ಶರಣ್ ಮತ್ತು ನಟಿ ನಿಶ್ವಿಕಾ ನಾಯ್ಡು ಮಿಂಚು
    ನಾಯಕ ನಟ ಶರಣ್ ಮತ್ತು ನಟಿ ನಿಶ್ವಿಕಾ ನಾಯ್ಡು ಮಿಂಚು ಹರಿಸಿದರು.
    ಖೋಖೋ ಕ್ರೀಡೆ ಮೇಲೆ ನಿರ್ಮಾಣವಾಗಿರುವ ‘ಗುರುಶಿಷ್ಯರು’ ಚಿತ್ರದ ಗೀತೆಗೆ ಹೆಜ್ಜೆ ಹಾಕಿದರು. ಜತೆಗೆ, ಡೈಲಾಗ್ ಹೊಡೆಯುವ ಮೂಲಕ ಸಭಿಕರನ್ನು ರಂಜಿಸಿದರು.
    ‘ಪಾಶ್ಚಾತ್ಯ ಆಟಗಳಿಂದಾಗಿ ನಮ್ಮ ನೆಲದ ದೇಸಿ ಆಟಗಳು ಮಹತ್ವ ಕಳೆದುಕೊಂಡಿವೆ. ನಮ್ಮ ನೆಲದ ಖೋಖೋ ಆಟ ಕೇಂದ್ರವಾಗಿಟ್ಟುಕೊಂಡು ಭಾವನಾತ್ಮಕ ಎಳೆಗಳೊಂದಿಗೆ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಮನೋಹರ ಎಂಬ ಪಾತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಹಳ್ಳಿ ಮಕ್ಕಳಿಗೆ ಖೋಖೋ ಕಲಿಸುವ ದೈಹಿಕ ಶಿಕ್ಷಣ ಶಿಕ್ಷಕನಾಗಿ ಅಭಿನಯಿಸಿದ್ದೇನೆ’ ಎಂದು ಶರಣ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts