More

    ಸಂಕ್ರಾಂತಿ ದಿನ ಕೂಡಲ ಸಂಗಮದಲ್ಲಿ ಸಭೆ

    ಗದಗ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ನಮ್ಮ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಧ್ಯದಲ್ಲೆ ಸಿಹಿ ಸುದ್ದಿ ಸಿಗುವ ಭರವಸೆ ಇದೆ ಎಂದು ಕೂಡಲಸಂಗಮ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಜ. 14ರಂದು ಕೂಡಲಸಂಗಮದಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಭೆ ಹಿನ್ನೆಲೆಯಲ್ಲಿ ನಗರದ 35ನೇ ವಾರ್ಡ್​ನ ಬಸಪ್ಪ ಕುರ್ತಕೋಟಿ ಲೇಔಟ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ‘ನಮ್ಮ ಸಮಾಜದ ಸಚಿವರು, ಶಾಸಕರು ಮುಖಂಡರು ಅವಿರತವಾಗಿ ಪ್ರಯತ್ನ ಪಡುತ್ತಿದ್ದು ಸಂತಸಕರ ವಿಚಾರವಾಗಿದೆ. ಅವರೆಲ್ಲರಿಗೂ ಸಮಾಜ ಚಿರಋಣಿಯಾಗಿರುತ್ತದೆ’ ಎಂದರು.

    ಹೋರಾಟ ಮುಂದುವರಿಸುವ ಮತ್ತು ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‘ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಕೈಗೊಂಡು ಯಶಸ್ವಿಗೊಳಿಸಲಾಗಿದೆ. ಜ. 14ರಂದು ಸಂಕ್ರಾತಿಯಂದು ಕೂಡಲ ಸಂಗಮದಲ್ಲಿ ಪಂಚಮಸಾಲಿ ಸಮಾಜದ ಬೃಹತ್ ಶಕ್ತಿ ಪ್ರದರ್ಶನ ಸಭೆ ಆಯೋಜಿಸಲಾಗಿದೆ ಎಂದರು.

    ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಸಮಾಜದ ಸದಸ್ಯರಾದ ಅನಿತಾ ಗಡ್ಡಿ, ವಿಜಯಲಕ್ಷ್ಮಿ ದಿಂಡೂರ, ಪ್ರಕಾಶ ಅಂಗಡಿ, ಮಹಾಂತೇಶ ನಲವಡಿ, ರವಿಕುಮಾರ ಕಮತರ, ಉಷಾ ದಾಸರ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಾಮನಗೌಡ ದಾನಪ್ಪಗೌಡ್ರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಪ್ರಶಸ್ತಿ ಪುರಸ್ಕೃತ ಬಸವರಾಜ ದಂಡಿನ ಅವರನ್ನು ಸಭೆಯಯಲ್ಲಿ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts