More

    ಶ್ರೇಷ್ಠ ಸಂತ ಬ್ರಹ್ಮರ್ಷಿ ಶ್ರೀನಾರಾಯಣ ಗುರು

    ಕುಶಾಲನಗರ: ಸಮಾಜದಲ್ಲಿ ಸಮುದಾಯವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಸಂತ ಬ್ರಹ್ಮರ್ಷಿ ಶ್ರೀನಾರಾಯಣ ಗುರು ಎಂದು ಜಿಲ್ಲಾ ಶ್ರೀನಾರಾಯಣ ಧರ್ಮ ಪರಿಪಾಲನ ಸಮಿತಿ ಅಧ್ಯಕ್ಷ ವಿ.ಕೆ. ಲೋಕೇಶ್ ಬಣ್ಣಿಸಿದರು.


    ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘದ ವತಿಯಿಂದ ಮಹಾಲಕ್ಷ್ಮಿಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀನಾರಾಯಣ ಗುರು ಹಾಗೂ ಮಹಾತ್ಮ ಅಯ್ಯನ್ ಕಾಳಿ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾರಾಯಣ ಗುರುಗಳು ಹೇಳಿದಂತೆ ನಮಗೆ ಬೇಕಾಗಿರುವುದು ದೇವಸ್ಥಾನವಲ್ಲ, ಶಾಲೆ, ಶಿಕ್ಷಣ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.


    ಸಮುದಾಯದವರು ದುಶ್ಚಟದಿಂದ ದೂರ ಇರಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ಭವಿಷ್ಯ ರೂಪಿಸುವತ್ತ ಗಮನ ಹರಿಸುವಂತೆ ಸಲಹೆ ನೀಡಿದರು.


    ಬಾಳೆಲೆ ವಿಜಯಲಕ್ಷ್ಮೀ ಪಿಯು ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಜೆ. ಸೋಮಣ್ಣ ಮಾತನಾಡಿ, ಸಮಾಜದಲ್ಲಿನ ಮೌಢ್ಯ, ಅಂಧಕಾರ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಏಕಾಂಗಿ ಹೋರಾಟ ನಡೆಸಿದ ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀನಾರಾಯಣ ಗುರು ಎಂದು ಬಣ್ಣಿಸಿದರು.


    ನಿವೃತ್ತ ಪ್ರಾಂಶುಪಾಲ ಎಚ್.ವಿ. ಬೆಳ್ಳಿಯಪ್ಪ ಮಾತನಾಡಿದರು. ಎಸ್ಸಿ,ಎಸ್ಟಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

    ಮಹಾಬೋಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಸತೀಶ್, ಡಾ.ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಎಸ್.ಜೆ. ಸತೀಶ್, ದಸಂಸದ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ, ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ, ಮುಖಂಡರಾದ ಎಂ.ಎಸ್. ವಿರೇಂದ್ರ, ಪರಶುರಾಮ, ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ಆದಿದ್ರಾವಿಡ ಸಮಾಜದ ಎಚ್.ಎಂ. ಸೋಮಪ್ಪ, ಎಸ್ಸಿ, ಎಸ್ಟಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಬಿ.ಸಿ. ರಾಜು, ಖಜಾಂಚಿ ನಿಂಗರಾಜು, ನಿರ್ದೇಶಕ ರಾಮಚಂದ್ರ, ಎಚ್.ಆರ್. ನಾಗೇಶ್, ಬೇಲಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts