More

    ಬಾಬಾ ಸಾಹೇಬರು ಜ್ಞಾನದ ಸಂಪತ್ತು

    ಸೇಡಂ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದರು. ಅಂತೆಯೇ ಇಡೀ ವಿಶ್ವವೇ ಬೆರಗುಗೊಳಿಸುವ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ ಎಂದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

    ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಛಲವಾದಿ ಸಮಾಜದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜಯಂತ್ಯುತ್ಸವ ನಿಮಿತ್ತ ಭಾನುವಾರ ರಾತ್ರಿ ಆಯೋಜಿಸಿದ್ದ ಭೀಮೋತ್ಸವ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜಗತ್ತಿನ ಉದ್ದಗಲಕ್ಕೆ ಸಂಚರಿಸಿ ವಿವಿಧ ದೇಶಗಳ ಸಂವಿಧಾನ, ಧರ್ಮ ಗ್ರಂಥಗಳ ಅಧ್ಯಯನ ಮಾಡುವುದು ಮಾತ್ರವಲ್ಲದೆ ದೇಶದಲ್ಲಿನ ವಿವಿಧ ಜಾತಿ, ಧರ್ಮ, ಆಚರಣೆ, ಪದ್ಧತಿ, ಅಸಮಾನತೆ ಅರಿತುಕೊಂಡು ಭಾರತೀಯರಿಗೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.

    ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ಅವರು ಈಡೀ ದೇಶದ ಆಸ್ತಿಯಾಗಿದ್ದಾರೆ, ಇಲ್ಲಿ ಎಲ್ಲರಿಗೂ ತಮ್ಮ ಧರ್ಮಗಳನ್ನು ಪಾಲನೆ ಮಾಡುವದಕ್ಕೆ ಸಂವಿಧಾನದಲ್ಲಿ ಅನುವು ಮಾಡಿಕೊಟ್ಟಿದ್ದಾರೆ. ಭಾರತ ದೇಶದ ಪ್ರತಿಯೊಬ್ಬರೂ ದೇವರಿಗೂ ಮೊದಲು ಅಂಬೇಡ್ಕರ್ ಅವರನ್ನು ನೆನೆಯಬೇಕು ಎಂದು ತಿಳಿಸಿದರು.

    ಉರಿಲಿಂಗ ಪೆದ್ದೀಶ್ವರ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಅಣದೂರ ಬುದ್ಧ ವಿಹಾರದ ಭಂತೆ ವರಜ್ಯೋತಿ, ಉಸ್ತುರಿ- ಧುತ್ತರಗಾಂವ್ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ, ಬೆಳಮಗಿ ಬುದ್ಧ ವಿಹಾರದ ಭಂತೆ ಅಮರಜ್ಯೋತಿ ಸಾನ್ನಿಧ್ಯ ವಹಿಸಿದ್ದರು.

    ತೋಟಗಾರಿಕೆ ಮಹಾಮಂಡಳಿ ನಿರ್ದೇಶಕ ಬಸವರಾಜ ಪಾಟೀಲ್ ಊಡಗಿ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಹಿರಿಯ ಸಾಹಿತಿ ಜಗನ್ನಾಥ ತರನಳ್ಳಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕರಯ್ಯಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಸಾಗರ, ಎಸ್ಸಿ-ಎಸ್ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗೋಪಾಲ ಸೇಡಂಕರ್, ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ತೋಟ್ನಳ್ಳಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸಿದ್ದು ಡೊಣ್ಣೂರ, ಪ್ರಮುಖರಾದ ಶರಣಪ್ಪ ತೆಲ್ಕೂರ, ಜಗನ್ನಾಥ ಚಿಂತಪಳ್ಳಿ, ಜೈಭೀಮ ಊಡಗಿ, ಶಂಭುಲಿಂಗ ನಾಟೀಕಾರ, ವಿಜಯಕುಮಾರ ಶರ್ಮಾ, ರಾಜು ಹಡಪದ, ಸತೀಶ ಪೂಜಾರಿ, ಚಂದ್ರಕಾಂತ ಗದ್ದಗಿ, ವಿಠ್ಠಲ್ ಭರಮಕರ್, ರವೀಂದ್ರ ಜಡೇಕರ್, ಸುನೀಲ ಕೊಳ್ಳಿ, ವೈಜನಾಥ ಒಂಟಿ, ಪ್ರಶಾಂತ ಸೇಡಂಕರ್, ವಿಲಾಸಗೌತಂ, ಲಕ್ಷ್ಮಣ ರಂಜೋಳಕರ್, ಸಿದ್ದು ಊಡಗಿ ಇತರರಿದ್ದರು.

    ಸಮಾವೇಶಕ್ಕೂ ಮುನ್ನ ಶ್ರೀ ಬಸವೇಶ್ವರ ವೃತ್ತದಿಂದ ಕೊತ್ತಲ ಬಸವೇಶ್ವರ ದೇವಾಲಯದವರೆಗೆ ಬೃಹತ್ ಬೈಕ್ ಹಾಗೂ ಕಾರು ರ‍್ಯಾಲಿ ನಡೆಸಲಾಯಿತು. ನಂತರ ಭೀಮ ಘರ್ಜನೆ ಭೀಮಯಾತ್ರೆ ಭವ್ಯ ಮೆರವಣಿಗೆ ಜರುಗಿತು.

    ನಾಟಿ ವೈದ್ಯ ಸಾಯಪ್ಪ ಮುದೋಳ, ಪ್ರಗತಿಪರ ರೈತ ಸೋಮಶೇಖರ ಬೊಮ್ನಳ್ಳಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

    ಸಮ ಸಮಾಜ ಹಾಗೂ ಸಮಾಜದಲ್ಲಿ ನೆಲೆಯೂರಿದ್ದ ಅನಿಷ್ಠ ಪದ್ಧತಿಗಳ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ಹೋರಾಡಿದ್ದರು. ಇಂದಿನ ಯುವಜನತೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ಬದುಕು ನಡೆಸಬೇಕು.
    | ಡಾ.ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts