More

    ಶ್ರೀ ಸಿದ್ದಪ್ಪಾಜಿಸ್ವಾಮಿ ಜಾತ್ರೆ ಇಂದಿನಿಂದ

    ಹಲಗೂರು: ಸಮೀಪದ ಚಿಲ್ಲಾಪುರ ಗ್ರಾಮದ ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಾ.7ರಿಂದ 9ರವರೆಗೆ ಆಯೋಜಿಸಲಾಗಿದೆ.


    ಮಂಗಳವಾರ ಬೆಳಗ್ಗೆ ಮೀನ ಲಗ್ನದ ಶುಭ ಮುಹೂರ್ತ 7.30 ರಿಂದ 8.45 ಗಂಟೆಯೊಳಗೆ ಪುಣ್ಯಾಹಃ, ಅಭಿಷೇಕ, ನವಗ್ರಹ ಪೂಜೆ, ಹೋಮ, ಧ್ವಜಾರೋಹಣ, ಮಧ್ಯಾಹ್ನ 12 ಗಂಟೆಗೆ ಸ್ವಾಮಿಯ ಗದ್ದಿಗೆ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.


    ಮಧ್ಯಾಹ್ನ 2 ಗಂಟೆಗೆ ಶ್ರೀ ಸಿದ್ದಪ್ಪಾಜಿ ಸ್ವಾಮಿಯ ಕಂಡಾಯಕ್ಕೆ ಹೂ ಹೊಂಬಾಳೆ ಸಲ್ಲಿಸಿ, ಗಂಗಾ ಸ್ನಾನದಿಂದ ಉತ್ಸವದೊಂದಿಗೆ ಸ್ವಾಮಿಯ ಕಂಡಾಯವನ್ನು ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ಚಂದ್ರಮಂಡಲೋತ್ಸವ ಜರುಗಲಿದೆ. ರಾತ್ರಿ 9 ಗಂಟೆಗೆ ಫಲಹಾರ ಪೂಜೆ ಜರುಗಲಿದೆ.


    ಮಾ.8ರ ಬೆ.6 ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮಹಾಮಂಗಳಾರತಿ ನಡೆಯಲಿದೆ.


    ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆಮಜ್ಜನ ಸೇವೆ, ಕಾದಗಟ್ಟಿಗೆ ಫಲಹಾರ ಪೂಜೆ, ಮಧ್ಯಾಹ್ನ 12 ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆಮಜ್ಜನ, ಸೇವೆಯನ್ನು ಏರ್ಪಡಿಸಲಾಗಿದೆ.


    ಮಾ.9 ರಂದು ಬೆಳಗ್ಗೆ 6 ಗಂಟೆಯಿಂದ ಪಂಕ್ತಿಸೇವೆ, ಪ್ರಸಾದ ವಿನಿಯೋಗ, ಬೆ.9 ಗಂಟೆಗೆ ಜಯಂತ್ಯುತ್ಸವ, ಶ್ರೀ ಮುತ್ತಾಂಜನೇಯೋತ್ಸವ ಸೇವೆ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts