More

    ಶ್ರೀ ರಂಭಾಪುರಿ ಜಗದ್ಗುರುಗಳ ಅಪ್ಪಣೆ: ಕಡೇನಂದಿಹಳ್ಳಿ ಶ್ರೀಗಳ ಮೌನ ಉಪವಾಸ ಮಂಗಲ

    ಶಿಕಾರಿಪುರ: ತಾಲೂಕಿನ ತಪೋಕ್ಷೇತ್ರ ಕಡೇನಂದಿಹಳ್ಳಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಕೈಗೊಂಡಿದ್ದ ಮೌನ ಉಪವಾಸ ವೃತವನ್ನು ವೈದ್ಯರ ಸಲಹೆಯಂತೆ ಶ್ರೀ ರಂಭಾಪುರಿ ಪೀಠಕ್ಕೆ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಕಠಿಣ ಅನುಷ್ಠಾನವನ್ನು ಮಂಗಲಗೊಳಿಸಿ ಆಶೀರ್ವಾದ ಪಡೆದಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.
    ಶ್ರೀಗಳು ಜುಲೈ 24ರಿಂದ ತಪೋಕ್ಷೇತ್ರದಲ್ಲಿ 108 ದಿನಗಳ ಕಾಲ ಮೌನ ಮತ್ತು ಉಪವಾಸ ವ್ರತ ಕೈಗೊಂಡು ಕಠೋರ ಶಿವಾನುಷ್ಠಾನ ಮಾಡುತ್ತಿದ್ದರು. ಆರೋಗ್ಯದಲ್ಲಿ ಏರು ಪೇರು ಉಂಟಾದುದನ್ನು ಗಮನಿಸಿ ವೈದ್ಯರ ಸಲಹೆಯಂತೆ ಮತ್ತು ಶ್ರೀ ರಂಭಾಪುರಿ ಜಗದ್ಗುರುಗಳ ಕಳಕಳಿಯ ಕರೆಯ ಮೇರೆಗೆ ಶ್ರೀ ರಂಭಾಪುರಿ ಪೀಠದಲ್ಲಿ ಶನಿವಾರ ಮಂಗಲಗೊಳಿಸಿ ಆಶೀರ್ವಾದ ಪಡೆದಿದ್ದಾರೆ. ಆದರೆ ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡಿದ್ದ ಒಂದು ಕೋಟಿ ಶಿವ ಪಂಚಾಕ್ಷರಿ ಮಂತ್ರ ಜಪ, ಮಳೆ ಮಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕ, ದುರ್ಗಾ ಸಪ್ತಶತಿ ಪಾರಾಯಣ ಮತ್ತು ಗುರು ಬಲ ಪ್ರಾಪ್ತಿಗಾಗಿ ಬೃಹಸ್ಪತಿ ಹೋಮ, ಪೂಜಾ ಕಾರ್ಯಗಳು ಯಥಾ ರೀತಿ ನಡೆಯುತ್ತವೆ. ನವೆಂಬರ್ 10ರಂದು ಶ್ರೀ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಇವೆಲ್ಲ ಕಾರ್ಯಕ್ರಮಗಳು ಪೂರ್ಣಗೊಳ್ಳುತ್ತವೆ ಎಂದು ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ಮುಖ್ಯಸ್ಥರು ಮತ್ತು ಎಲ್ಲ ಸದಸ್ಯರು ತೀರ್ಮಾನ ಕೈಗೊಂಡು ಜಗದ್ಗುರುಗಳಿಗೆ ಭಿನ್ನವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts