ಜೋರು ಗಾಳಿಗೆ ನೆಲಕ್ಕುರುಳಿದ ಬಾಳೆ, ಟೊಮ್ಯಾಟೊ

blank

ಹನೂರು: ತಾಲೂಕಿನ ಕೆಲವು ಗ್ರಾಮಗಳಲ್ಲಿ ಗುರುವಾರ ಕೆಲಕಾಲ ತುಂತುರು ಮಳೆಯಾಗಿದ್ದು, ಅಜ್ಜೀಪುರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಜೋರು ಗಾಳಿಗೆ ಬಾಳೆ ಹಾಗೂ ಟೊಮ್ಯಾಟೊ ಫಸಲು ನೆಲಕ್ಕುರುಳಿದ್ದು, ಮನೆಯ ಛಾವಣಿ ಹಾರಿ ಹೋಗಿದೆ. ತಾಲೂಕಿನಲ್ಲಿ ಬೆಳಗ್ಗೆ ಬಿಸಿಲಿನ ಬೇಗೆ ಎಂದಿನಂತೆ ಇತ್ತು. ಆದರೆ ಮಧ್ಯಾಹ್ನ ಸುಮಾರು 2 ಗಂಟೆ ಹೊತ್ತಿಗೆ ಮೋಡ ಕವಿದ ವಾತವರಣ ನಿರ್ಮಾಣವಾಗಿತ್ತು. ಈ ವೇಳೆ ಹನೂರು ಪಟ್ಟಣ ಸೇರಿದಂತೆ, ಮಂಗಲ, ಆನಾಪುರ, ನಾಗಣ್ಣನಗರ, ಲೊಕ್ಕನಹಳ್ಳಿ ಹಾಗೂ ರಾಮಾಪುರ ಭಾಗದಲ್ಲಿ ಸುಮಾರು ಐದಾರು ನಿಮಿಷ ತುಂತುರು ಮಳೆಯಾದರೆ, ಕೌದಳ್ಳಿಯಲ್ಲಿ ಸುಮಾರು ಅರ್ಧ ಗಂಟೆ ಜೋರು ಮಳೆ ಸುರಿಯಿತು. ಗಾಳಿ ಸಹಿತ ಮಳೆಯಿಂದಾಗಿ ದೊಮ್ಮನಗದ್ದೆ ಗ್ರಾಮದಲ್ಲಿ ಶಿವರಾಜು ಅವರ ಮನೆಯ ಛಾವಣಿ ಹಾರಿ ಹೋಗಿದೆ.

ಇನ್ನು ಅಜ್ಜೀಪುರ ಗ್ರಾಮದಲ್ಲಿ ಗಾಳಿ ಸಹಿತ ಮಳೆಗೆ ಸಂಪತ್ ಅವರಿಗೆ ಸೇರಿದ ಬಾಳೆ ಫಸಲು ಬಹುತೇಕ ನೆಲಕ್ಕುರುಳಿದೆ. ಇತ್ತ ರಾಮಾಪುರ ಸಮೀಪದ ನಾಗಣ್ಣ ನಗರದಲ್ಲಿ ಗಾಳಿಯ ರಭಸಕ್ಕೆ ಮುರುಗೇಶ್ ಎಂಬುವವರು 1 ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಬಹುತೇಕ ಬಾಗಿವೆ. ಜಿ.ಆರ್.ನಗರದ ರಂಗ ಅವರಿಗೆ ಸೇರಿದ ಟೊಮ್ಯಾಟೊ ಬೆಳೆ ನೆಲಕ್ಕರಡಿದೆ.

ಬೇಗೆಗೆ ಬಸವಳಿದರು: ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಐದಾರು ನಿಮಿಷ ತುಂತುರು ಮಳೆಯಾದ್ದರಿಂದ ಆ ಕ್ಷಣಕ್ಕೆ ತಂಪು ಅನುಭವ ನೀಡಿತು. ಬಳಿಕ ಬಿಸಿಲು ಎಂದಿನಂತೆ ಇತ್ತು. ಜತೆಗೆ ತುಂತುರು ಮಳೆಯಾದ್ದರಿಂದ ಸಂಜೆ ಹೊತ್ತಿಗೆ ಭೂಮಿಯ ಕಾವು ಹೆಚಾಗಿ ಜನರು ಬಸವಳಿಯುವಂತಾಯಿತು.

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…