More

    ಶ್ರೀರಾಮ ಮಂದಿರ ಉದ್ಘಾಟನೆ ಹಬ್ಬದ ಸಂಭ್ರಮ ಆಗಲಿ

    ತಾಳಿಕೋಟೆ: ಹಿಂದುಗಳ ಆರಾಧ್ಯ ದೈವ ಶ್ರೀರಾಮ ಚಂದ್ರನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭಕ್ತಿಯ ಪರಾಕಾಷ್ಠೆಯೊಂದಿಗೆ ಹಬ್ಬದ ಸಂಭ್ರಮ ಎಲ್ಲೆಡೆ ಮೊಳಗಲಿ ಎಂದು ಆರ್‌ಎಸ್‌ಎಸ್ ಹಿರಿಯ ಸ್ವಯಂ ಸೇವಕ ಚಿದಂಬರ ಕರಮರಕರ (ಭಕ್ಷಿ) ಹೇಳಿದರು.

    ಅಯೋಧ್ಯೆ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಜ.22 ರಂದು ನಡೆಯುವ ಅಂಗವಾಗಿ ಆಗಮಿಸಿದ ಶ್ರೀರಾಮ ಮಂತ್ರಾಕ್ಷತೆಯನ್ನು ವಿವಿಧ ಸಮಾಜ ಬಾಂಧವರಿಗೆ ವಿತರಿಸಿ ಭಾನುವಾರ ಅವರು ಮಾತನಾಡಿದರು.

    ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಅಮೃತ ಘಳಿಗೆಯಲ್ಲಿ ಜನರು ತಮ್ಮ ತಮ್ಮ ಗ್ರಾಮ, ಮೊಹಲ್ಲಾ, ಕಾಲನಿ, ಬಸ್ತಿಗಳಲ್ಲಿರುವ ಮಂದಿರಗಳಲ್ಲಿ ಕಾರ್ಯಕ್ರಮ ಆಯೋಜಿಸುವುದು, ಆಯಾ ಬಡಾವಣೆಗಳಲ್ಲಿರುವ ಮಂದಿರದಲ್ಲಿ ಆಸುಪಾಸಿನಲ್ಲಿರುವ ರಾಮಭಕ್ತರನ್ನು ಒಗ್ಗೂಡಿಸಿ ಕಾರ್ಯಕ್ರಮ ಆಯೋಜಿಸುವುದು, ದೂರದರ್ಶನ(ಟಿವಿ)- ಎಲ್‌ಇಡಿ ಪರದೆ- ಪ್ರೊಜೆಕ್ಟರ್ ಹಾಗೂ ಯಾವುದೇ ತರಹದ ಪರದೆಯಲ್ಲಿ ಅಯೋಧ್ಯೆಯ ಕಾರ್ಯಕ್ರಮವನ್ನು ನೇರವಾಗಿ ಎಲ್ಲ ಜನರಿಗೆ ವೀಕ್ಷಿಸಲು ವ್ಯವಸ್ಥೆ ಮಾಡುವುದು, ಆಯಾ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ವಿವಿಧ ದೇವತೆಗಳ ಭಜನೆ, ಕೀರ್ತನೆ, ಪೂಜೆ ಮತ್ತು ಆರತಿಗಳನ್ನು ಮಾಡಬೇಕು ಎಂದರು.

    ಶ್ರೀರಾಮ ಜಯರಾಮ ಜಯಜಯರಾಮ- ವಿಜಯ ಮಹಾಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪ ಮಾಡುವುದು, ಇದರ ಜತೆಗೆ ಹನುಮಾನ್ ಚಾಲಿಸಾ, ಸುಂದರಕಾಂಡ ಪಾರಾಯಣ, ರಾಮರಕ್ಷಾಸ್ತೋತ್ರದ ಪಠಣಗಳನ್ನೂ ಸಹ ಜೋಡಿಸಿಕೊಳ್ಳಬಹುದು. ಶಂಖನಾದ ಮತ್ತು ಘಂಟಾನಾದದೊಂದಿಗೆ ಆರತಿ ಮತ್ತು ಪ್ರಸಾದದ ವಿತರಣೆ ಮಾಡುವುದು. ಈ ಶುಭದಿನದಂದು ಎಲ್ಲ ದೂರದರ್ಶನ ಚಾನಲ್‌ಗಳಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ. ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಸೂರ್ಯಾಸ್ತವಾದ ನಂತರ ತಮ್ಮ ತಮ್ಮ ಮನೆಗಳ ಮುಂದೆ ದೀಪಗಳನ್ನು ಬೆಳಗಿಸಬೇಕು ಎಂದರು.

    ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ರಾಜವಾಡೆಯಲ್ಲಿರುವ ಶಿವಭವಾನಿ ಮಂದಿರದಲ್ಲಿ ಶಿವಭವಾನಿ ದೇವಿ ಹಾಗೂ ಗ್ರಾಮದೇವತೆ(ದ್ಯಾಮವ್ವದೇವಿ)ಗೆ ಮಂತ್ರಾಕ್ಷತೆಯೊಂದಿಗೆ ಪೂಜೆ ಸಲ್ಲಿಸಿ ರಾಜವಾಡೆಯಲ್ಲಿ ಮಂತ್ರಾಕ್ಷತೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

    ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಭಟ್ ಜೋಶಿ, ಶ್ರೀಶೈಲ ಬಡಿಗೇರ, ಪ್ರಭು ಬಡಿಗೇರ, ನಾಗಪ್ಪ ಬಡಿಗೇರ, ಮರಾಠಾ ಸಮಾಜದ ಅಧ್ಯಕ್ಷ ಸಂಭಾಜಿ ವಾಡಕರ, ಜೀಜಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾಬಾಯಿ ನೂಲಿಕರ, ಜಯಶ್ರೀ ಘಾವಡೆ, ಪುರಸಭಾ ಸದಸ್ಯರಾದ ಅಣ್ಣಾಜಿ ಜಗತಾಪ, ಜಿ.ಟಿ.ಘೋರ್ಪಡೆ, ಕಾಶಿರಾಯ ಮೋಹಿತೆ, ರಂಗನಾಥ ನೂಲಿಕರ, ಪ್ರಕಾಶ ಸಾಸಾಬಾಳ, ಮಾರುತಿ ಘಾಟಗೆ, ಶಾಂತಗೌಡ ಪಾಟೀಲ, ಬಸವಂತ್ರಾಯ ಸುಭೆದಾರ, ರಾಘವೇಂದ್ರ ಮಾನೆ, ವಿಠ್ಠಲ ಮೋಹಿತೆ, ಶಿವು ಪಾಟೀಲ, ಸಂತೋಷ ಘಾವಡೆ, ಮಲ್ಲನಗೌಡ ಪಾಟೀಲ, ಸಂತೋಷ ಡಿಸಲೆ, ಚಂದ್ರ ಮಠಪತಿ, ರಮೇಶ ಮೋಹಿತೆ, ಮಲ್ಲು ಹಿಪ್ಪರಗಿ, ಬಸ್ಸು ಕಶೆಟ್ಟಿ, ಕಲ್ಲಪ್ಪಗೌಡ ಪಾಟೀಲ, ಶ್ರೀಶೈಲ ಹುಣಶ್ಯಾಳ, ಮಲ್ಲು ಹಡಪದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts