More

    ಶ್ರೀರಾಮ ಭಕ್ತರ 500 ವರ್ಷಗಳ ಕನಸು ನನಸು

    ತಾಳಿಕೋಟೆ: ರಾಮಭಕ್ತರಾದ ಕಾವಿ, ಖಾಕಿ, ಖಾದಿ ಸಹಕಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲು ಕಾರಣವಾಗಿದೆ ಜ.22 ರಂದು ಶ್ರೀರಾಮಮೂರ್ತಿ ಪ್ರತಿಷ್ಠಾಪನೆಗೊಳ್ಳಲು ಸಿದ್ಧತೆ ನಡೆದಿದ್ದು ಅತೀವ ಸಂತಸ ತಂದಿದೆ ಎಂದು ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಹೇಳಿದರು.

    ಸ್ಥಳೀಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವಹಿಂದು ಪರಿಷತ್ ನೇತೃತ್ವದಲ್ಲಿ ಅಯ್ಯೋಧ್ಯೆಯಿಂದ ಭಾನುವಾರ ಆಗಮಿಸಿದ ಮಂತ್ರಾಕ್ಷತೆ ಹಾಗೂ ಕಲಶಗಳ ಭವ್ಯ ಶೋಭಾಯಾತ್ರೆಯ ಕುರಿತು ಜರುಗಿದ ಶ್ರೀರಾಮ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಖಾವಿ ಎಂದರೆ ಸಾದು ಸಂತರು, ಖಾಕಿ ಎಂದರೆ ದೇಶ ಕಾಯುವ ವೀರ ಯೋಧರು, ಖಾದಿ ಎಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರಂಥ ರಾಜಕಾರಣಿಗಳು. ಇಡೀ ದೇಶದ ಶ್ರೀರಾಮ ಭಕ್ತರ 500 ವರ್ಷಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರ ರಾಷ್ಟ್ರೀಯ ದೇವಸ್ಥಾನವಾಗಿದೆ. ಅಂತಹ ಅಯ್ಯೋಧ್ಯೆಯಿಂದ ತಂದ ಅಕ್ಷತೆಗಳನ್ನು ಪ್ರತಿಯೊಂದು ಗ್ರಾಮ, ಪಟ್ಟಣಗಳ ಪ್ರತಿ ಮನೆ ಮನೆಗೂ ಕಾರ್ಯಕರ್ತರ ಮೂಲಕ ಮುಟ್ಟಿಸುವ ಕಾರ್ಯ ನಡೆಯಲಿದೆ. ಜ.22 ರಂದು ಶ್ರೀರಾಮ ಮೂರ್ತಿ ಪ್ರತಿಷ್ಠಾಪನಾ ಸಮಯದಲ್ಲಿ ದೀಪ ಬೆಳಗಿಸಿ ಶ್ರೀರಾಮ ನಾಮ ಜಪ ಮಾಡಿ ಎಲ್ಲರೂ ಶ್ರೀರಾಮನ ಆದರ್ಶ ಭಕ್ತರಾಗಬೇಕು ಎಂದರು.

    ಶಿವಭವಾನಿ ಮಂದಿರದ ಅರ್ಚಕ ವೇ.ಸಂತೋಷಭಟ್ ಜೋಶಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಹಿಂದುತ್ವದ ಸಲುವಾಗಿ ಹೋರಾಡಿ ಹಿಂದು ಧರ್ಮ ರಕ್ಷಣೆ ಮಾಡಿದ್ದಾರೆ. ಅವರಂತೆ ಮೋದಿ ಅವರು ಕೂಡ ನಮ್ಮೆಲ್ಲರ ಬೆನ್ನೆಲುಬಾಗಿ ನಿಂತು ಶ್ರೀರಾಮ ಮಂದಿರ ಉದ್ಘಾಟನೆಗೆ ಮುಂದಾಗಿರುವದು ಎಲ್ಲರಿಗೂ ಸಂತಸ ತಂದಿದೆ ಎಂದರು.

    ಚಬನೂರ ಹಿರೇಮಠದ ರಾಮಲಿಂಗಯ್ಯ ಸ್ವಾಮಿಗಳು ಮಾತನಾಡಿ, ಶ್ರೀರಾಮಚಂದ್ರ ಮಂದಿರ ಕಟ್ಟಡ ಕಟ್ಟಬೇಕೆಂಬ ಅಪೇಕ್ಷೆ ಕಳೆದ 500 ವರ್ಷಗಳಿಂದಲೂ ಇತ್ತು. ಅದು ಈಗ ಕೂಡಿ ಬಂದಿದ್ದು, ಶ್ರೀರಾಮ ಚಂದ್ರ ಅವತಾರದಲ್ಲಿ ಮೋದಿಜಿ ಬಂದಿದ್ದಾರೆ ಎಂದರು.

    ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪರಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಖಾಸ್ಗತೇಶ್ವರ ಮಠದಲ್ಲಿ ಮಂತ್ರಾಕ್ಷತೆಗೆ ಮಹಾ ಪೂಜೆ ಮಾಡಿ ಮಂತ್ರಾಕ್ಷತೆ ಮತ್ತು ಕಲಶಗಳೊಂದಿಗೆ ಶ್ರೀರಾಮಚಂದ್ರನ ಭಾವಚಿತ್ರದ ಮಹಾರಥದ ಭವ್ಯ ಮೆರವಣಿಗೆಯ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಠ್ಠಲ ಮಂದಿರಕ್ಕೆ ಆಗಮಿಸಿ ಧರ್ಮ ಸಭೆಯಾಗಿ ಮಾರ್ಪಟ್ಟಿತು.

    ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಗೇಶ ವಿರಕ್ತಮಠ, ಶ್ರೀಧರ ಜೋಶಿ, ಸುಧೀರ ದೇಶಪಾಂಡೆ, ವಿಶ್ವ ಹಿಂದು ಪರಿಷತ್‌ನ ಚಂದ್ರಶೇಖರ ದೊಡಮನಿ, ಪ್ರಮೋದ ಅಗರವಾಲಾ, ಜೈಸಿಂಗ್ ಮೂಲಿಮನಿ, ಕಕ್ಕು ರಂಗ್ರೇಜ್, ರಾಜು ಹಂಚಾಟೆ, ಕಾಶಿನಾಥ ಮುರಾಳ, ಮಾನಸಿಂಗ್ ಕೊಕಟನೂರ, ಎಂ.ಎಸ್.ಸರಶೆಟ್ಟಿ, ಕಾಶಿನಾಥ ಸಜ್ಜನ, ತಮ್ಮಣ್ಣ ದೇಶಪಾಂಡೆ, ಸಂಬಾಜಿ ವಾಡಕರ, ವಿಠ್ಠಲ ಮೋಹಿತೆ, ರಾಘವೇಂದ್ರ ಮಾನೆ, ಶಶಿಧರ ಡಿಸಲೆ, ರಾಜು ಅಲ್ಲಾಪುರ, ಶ್ರೀನಿವಾಸ ಸೋನಾರ, ಅಶೋಕ ಬಳಗಾನೂರ, ನಾಗೇಶ ದೇಶಪಾಂಡೆ, ಕಾಶಿನಾಥ ಅರಳಿಚಂಡಿ, ಯಲ್ಲು ಧಾಯಪುಲೆ, ಶಿವಮ್ಮ ಬಿರಾದಾರ, ಭೋರಮ್ಮ ಕುಂಬಾರ ಇತರರಿದ್ದರು. ಶಿಕ್ಷಕ ಸಂಗಮೇಶ ಪಾಲ್ಕಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts