More

    ಶ್ರೀನಿವಾಸಗೌಡ ಮಾರ್ಗದರ್ಶನ ಅಗತ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಮತ, ಧ್ವಜಸ್ಥಂಭ ಸ್ಥಾಪನೆಗೆ 1.16 ಲಕ್ಷ ರೂ. ನೆರವು

    ಕೋಲಾರ: ಸಹಕಾರಿ ಕ್ಷೇತ್ರದ ನನ್ನ ಸಾಧನೆಗೆ ಶಾಸಕ ಕೆ.ಶ್ರೀನಿವಾಸಗೌಡ ಮಾರ್ಗದರ್ಶನ ಕಾರಣವಾಗಿದ್ದು, ರಾಜಕೀಯ ಜೀವನದಲ್ಲೂ ಅವರ ತೀರ್ವಾನದಂತೆ ಮುನ್ನಡೆಯುವುದಾಗಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

    ತಾಲೂಕಿನ ಕೋಡಿಕಣ್ಣೂರಿನಲ್ಲಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇವಾಲಯದ ಧ್ವಜಸ್ಥಂಭ ಸ್ಥಾಪನೆಗೆ ಗುರುವಾರ 1.16 ಲಕ್ಷ ರೂ. ನೆರವು ನೀಡಿ ವಾತನಾಡಿದರು.

    ಅಣ್ಣಿಹಳ್ಳಿ ಸಹಕಾರ ಸಂದಿಂದ ಸಹಕಾರ ಕ್ಷೇತ್ರಕ್ಕೆ ಬಂದ ಶ್ರೀನಿವಾಸಗೌಡರು, ಸಹಕಾರ ವಾರಾಟ ಮಹಾಮಂಡಳಿ, ಕ್ರಿಬ್ಕೊ, ಸಂಸ್ಥೆಗಳ ಮೂಲಕ ಸಹಕಾರಿ ಕ್ಷೇತ್ರದಲ್ಲಿ ವಿಶ್ವಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಅವರ ವಾರ್ಗದರ್ಶನದಿಂದ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಅನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

    80ರ ದಶಕದಲ್ಲಿ ಬ್ಯಾಲಹಳ್ಳಿ ಡೇರಿ ಮೂಲಕ ಸಹಕಾರ ಕ್ಷೇತ್ರಕ್ಕೆ ಪ್ರವೇಶಿಸಿದ ನನ್ನನ್ನು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕನಾಗಲು ಶ್ರೀನಿವಾಸಗೌಡರು ಸಹಕಾರ ನೀಡಿದ್ದಾರೆ. ನಂತರ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರು ಮತ್ತು ರೈತರ ಸಹಕಾರ ಸಂದ ಅಧ್ಯಕ್ಷನಾಗಿ, ಗೃಹ ನಿರ್ವಾಣ ಸಹಕಾರ ಸಂದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅವರ ಆಶೀರ್ವಾದ ಹಾಗೂ ವಾರ್ಗದರ್ಶನವೇ ಕಾರಣ ಎಂದು ತಿಳಿಸಿದರು.
    ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಶ್ರೀನಿವಾಸಗೌಡರ ವಾರ್ಗದರ್ಶನ, ಅವರ ತೀರ್ವಾನದಂತೆ ಹೆಜ್ಜೆ ಇಡುತ್ತೇನೆ. ರಾಜಕಾರಣದಲ್ಲಿ ಜಿಪಂ ಸದಸ್ಯ, ಶಾಸಕ, ಸಚಿವರಾಗಿ ಅಪಾರ ಅನುಭವ ಪಡೆದಿರುವ ಅವರ ಆಶೀರ್ವಾದ ಅಗತ್ಯವಿದೆ. 2004ಕ್ಕಿಂತ ಮುಂಚೆ ಕೋಲಾರ ಡಿಸಿಸಿ ಬ್ಯಾಂಕ್ ಎಂಬುದು ಜನರ ಮನಸ್ಸಿನಿಂದಲೇ ಅಳಿಸಿಹೋಗುವ ಹಂತ ತಲುಪಿತ್ತು, ದಿವಾಳಿಯಾಗಿ ಠೇವಣಿದಾರರ ಹಣ ನೀಡಲು ಸಾಧ್ಯವಿಲ್ಲವೆಂಬ ಅಪವಾದಕ್ಕೆ ಗುರಿಯಾಗಿತ್ತು. ಆದರೆ ಪ್ರಸ್ತುತ ಡಿಸಿಸಿ ಬ್ಯಾಂಕ್ ದೇಶದ ನಂ.1 ಬ್ಯಾಂಕ್ ಆಗಿದೆ ಎಂದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ವಾತನಾಡಿ, ಗೋವಿಂದಗೌಡರು ಡಿಸಿಸಿ ಬ್ಯಾಂಕ್ ಉಳಿಸುವ ಮೂಲಕ ಲಕ್ಷಾಂತರ ತಾಯಂದಿರ ಬದುಕಿಗೆ ನೆರವಾಗಿದ್ದಾರೆ. ಇದರ ಜತೆಗೆ ನಿತ್ಯ ಕಿಡ್ನಿ ವೈಫಲ್ಯ, ಹೃದಯಸಂಬಂಧಿ ತೊಂದರೆ, ಓದು ನಿಲ್ಲಿಸಿದವರು ಸೇರಿ ಹಲವು ಸಂಕಷ್ಟಗಳೊಂದಿಗೆ ಬರುವ ಬಡವರಿಗೆ ಲಕ್ಷಾಂತರ ರೂ. ನೆರವು ನೀಡಿ ಅವರ ಜೀವ ಉಳಿಸುವ ಕಾಯಕ ವಾಡುತ್ತಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ, ಸಮವಸ ಹೀಗೆ ಹಲವು ಕೊಡುಗೆ ನೀಡುತ್ತಿದ್ದು, ಸವಾಜ ಗುರುತಿಸುವ ಕೆಲಸ ವಾಡುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts