More

    ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ರಜತ ಮಹೋತ್ಸವ

    ಬ್ಯಾಡಗಿ: ಭಾರತೀಯ ಪರಂಪರೆ, ಧರ್ವಚರಣೆಗಳು ಸರ್ವರಿಗೂ ಹಿತಬಯಸುವ ಹಾಗೂ ಮೌಲ್ಯವಾದ ಸಂದೇಶ ಸಾರುತ್ತವೆ ಎಂದು ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯರು ಹೇಳಿದರು.

    ಪಟ್ಟಣದ ಹೆಸ್ಕಾಂ ಕಾರ್ಯಾಲಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ರಜತ ಮಹೋತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ಪ್ರಾಚೀನ ಕಾಲದಿಂದಲೂ ಗುರುಕುಲ ಪದ್ಧತಿ, ಗುರುಪರಂಪರೆ, ವಿವಿಧ ಧರ್ಮದಾಚರಣೆ, ಸಂಸ್ಕೃತಿಗಳನ್ನು ನಾವು ಅನುಸರಿಸುತ್ತಿದ್ದೇವೆ. ಆಸ್ತಿ, ಹಣ ಹಾಗೂ ಬೇರೆಬೇರೆ ವಿಚಾರಗಳನ್ನು ಬೆನ್ನು ಹತ್ತಿ ಶಾಂತಿ- ನೆಮ್ಮದಿ ಇಲ್ಲವಾಗಿದೆ. ಗುರುವಿನ ಮಾರ್ಗವೂ ಇಲ್ಲ, ಶಿವನ ಧ್ಯಾನವೂ ಇಲ್ಲ ಎನ್ನುವಂತಾಗಿದೆ. ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಧರ್ಮ, ಸಿದ್ಧಾಂತಗಳ ಅನುಕರಣೆ ನಡೆದಿದೆ. ಯುವಪೀಳಿಗೆಯಲ್ಲಿ ಕೌಟುಂಬಿಕ ಜವಾಬ್ದಾರಿ, ಗುರುಹಿರಿಯರ ಬಗ್ಗೆ ಕಾಳಜಿ ಇಲ್ಲವಾಗಿದೆ. ಮಾನವನಿಗೆ ಋಣಭಾರ ತೀರಿಸುವ ಹಾಗೂ ಪರೋಪಕಾರ ಗುಣ ಇರಬೇಕು. ದಾನ ಕೊಟ್ಟಿದ್ದನ್ನು ಹೇಳಬಾರದು, ಪಡೆದವರು ಮರೆಯಬಾರದು. ಧರ್ಮ ಮಾನವನಿಗೆ ದಾರಿದೀಪವಿದ್ದಂತೆ ಎಂದರು.

    ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಸ್ಪಟಿಕಲಿಂಗ ದರ್ಶನಕ್ಕೆ ಆಗಮಿಸಿದ್ದ ಪದ್ಮಶ್ರೀ ಡಾ. ವಿಜಯಸಂಕೇಶ್ವರ ಅವರು ಮಠದ ಶ್ರೇಷ್ಠ ಪರಂಪರೆಯನ್ನು ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಮೂಲಕ ನಾಡಿಗೆ ಪರಿಚಯಿಸಿದ ಪುಣ್ಯಾತ್ಮರು. ಧಾರ್ವಿುಕ ಹಾಗೂ ಸಾಮಾಜಿಕ, ಔದ್ಯೋಗಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಕಾಯಕ ಯೋಗವನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡ ದೊಡ್ಡ ಸಾಧಕರಾದ ಅವರ ಜೀವನ ಮಾದರಿ. ವಿಜಯವಾಣಿ ಸಂಸ್ಕೃತಿ ಪುರವಣಿಯಲ್ಲಿ ವಾರಕ್ಕೊಮ್ಮೆ ವಿಶಿಷ್ಟ ಧಾರ್ವಿುಕ ಕ್ಷೇತ್ರಗಳು, ಹಬ್ಬ, ಹರಿದಿನ, ಜಾತ್ರೆ, ಉತ್ಸವ ಕುರಿತ ಲೇಖನಗಳು ಸಮಾಜಕ್ಕೆ ಬೆಳಕು ಚೆಲ್ಲಿವೆ. ದಿಗ್ವಿಜಯ ವಾಹಿನಿ ಮೂಲಕ ರಾಷ್ಟ್ರೀಯ ಚಿಂತನೆ, ಪರಿಸರ ಕಾಳಜಿ, ಆರೋಗ್ಯ ಕಾರ್ಯಕ್ರಮಗಳು ಜನಪರವಾಗಿವೆ. ಡಾ. ವಿಜಯಸಂಕೇಶ್ವರ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ ಗೌರವ ನೀಡಿರುವುದು ಸಂತಸ ತಂದಿದೆ ಎಂದರು.

    ನಿವೃತ್ತ ಸಿಬ್ಬಂದಿ, ವಿವಿಧ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಹೆಸ್ಕಾಂ ಇಂಜಿನಿಯರ್ ವಿಜಯಕುಮಾರ ಮುದಕಣ್ಣನವರ, ಎಂ.ಬಿ. ಪಾಟೀಲ, ರೇಣುಕಾ ತೆಂಬದ, ಎಚ್.ಎಸ್. ಬಸವರಾಜಯ್ಯ, ನಾಗಪ್ಪ ಬೆಳಕೇರಿ, ಎಚ್. ರುದ್ರಣ್ಣ, ಎ.ಪಿ. ಫಣಿರಾಜ್, ಎ.ಎಚ್. ಸಾಳುಂಕೆ, ಡಾ.ಪ್ರಕಾಶ ಭಸ್ಮೆ, ವಾಮದೇವಪ್ಪ ಎಂ., ಎಸ್.ಎಚ್. ಕೊಟ್ರಯ್ಯ, ಡಾ.ಮೃತ್ಯುಂಜಯ ತುರಕಾಣಿ, ಮೃತ್ಯುಂಜಯ್ಯ ಹಿರೇಮಠ, ಮಾಲತೇಶ ಹುಣಸಿಮರದ, ಬಿ.ಎಸ್. ಬಳಿಗಾರ, ಎಸ್.ಎಸ್. ಹೊಸಮನಿ, ಎಸ್.ಎಸ್. ರ್ಬಾ, ಬಿ.ಎಂ. ಅಂಗಡಿ, ಬಿ.ವೆಂಕಟೇಶ ನಾಯ್ಕ, ಪಿ.ಎಫ್. ತೋಟಗೇರ, ಸಂತೋಷ ಲಮಾಣಿ, ನಾಗೇಶ ಎಂ.ಆಯ, ಪಿ.ಎಂ. ಕರ್ಜಗಿ, ಸಂಗಮೇಶ ಎನ್., ಪಿ.ಜಿ. ಮುಸಲಿ ಇದ್ದರು.

    ಹೆಸ್ಕಾಂ ಆವರಣದಲ್ಲಿ 25 ವರ್ಷಗಳ ಹಿಂದೆ ಬಲಮುರಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಮಂದಿರ ನಿರ್ವಿುಸುವ ವೇಳೆ ಇಲ್ಲಿ ಕಾರ್ಯಸಲ್ಲಿಸುತ್ತಿದ್ದ ಹೆಸ್ಕಾಂ ಅಧಿಕಾರಿ ಫಜಲ್​ಹಸನಸಾಬ ಬಾನುವಳ್ಳಿ ಗಣೇಶಮೂರ್ತಿಯನ್ನು ದಾನವಾಗಿ ನೀಡುವ ಮೂಲಕ ಸರ್ವಸಮುದಾಯಗಳು ಒಟ್ಟೊಟ್ಟಿಗೆ ಬಾಳುವ ಹಾಗೂ ನೌಕರರೆಲ್ಲರೂ ಒಂದೆ ಎನ್ನುವ ತತ್ತ್ವ ಸಾರಿದ್ದಾರೆ. ಇಂತಹ ಭಾವನೆಗಳು ಎಲ್ಲರಲ್ಲಿ ಬೆಳೆದುಬಂದಲ್ಲಿ ನಾಡಿನಲ್ಲಿ ಸಾಮರಸ್ಯ ಹೆಚ್ಚಾಗಲಿದೆ. – ಮನೋಹರ ಬೇವಿನಮರದ, ಹೆಸ್ಕಾಂ ವಿಭಾಗದ ಹಿರಿಯ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts