More

    ಶ್ರೀ ದ್ಯಾಮವ್ವದೇವಿ ಮೆರವಣಿಗೆ ಸಂಭ್ರಮ

    ಹಾವೇರಿ: 115 ವರ್ಷಗಳ ಬಳಿಕ ನಗರದಲ್ಲಿ ನಡೆದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರೆಯ ಅಂಗವಾಗಿ ಗುರುವಾರ ಸಂಜೆ ಸಾಂಪ್ರದಾಯಿಕ ಪದ್ಧತಿಯಂತೆ ಮೆರವಣಿಗೆ ಮೂಲಕ ದೇವಿಯನ್ನು ಗಡಿಗೆ ಕಳಿಸಲಾಯಿತು.

    ಬುಧವಾರ ನಸುಕಿನ ಜಾವ 4ರಿಂದ ಗುರುವಾರ ಸಂಜೆ 4ರವರೆಗೆ ನಗರದ ಚೌತಮನಿ ಕಟ್ಟೆಯಲ್ಲಿನ ಮಹಾಮಂಟಪದಲ್ಲಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಗುರುವಾರ ಸಂಜೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಟಪದಿಂದ ಟ್ರ್ಯಾಕ್ಟರ್​ನಲ್ಲಿ ಮೆರವಣಿಗೆ ಮೂಲಕ ಗಡಿ ಕಳಿಸುವ ಮೆರವಣಿಗೆ ಆರಂಭಗೊಂಡಿತು. ಈ ಸಮಯದಲ್ಲಿ ಕುಂಕುಮ, ಭಂಡಾರದಿಂದ ಓಕುಳಿ ಆಡಲಾಯಿತು. ಫೆ. 28ರಂದು ಬೆಳಗ್ಗೆ 10 ಗಂಟೆಗೆ ದ್ಯಾಮವ್ವ ದೇವಿಯನ್ನು ಗುಡಿ ತುಂಬಿಸಲಾಗುವುದು. ಬಳಿಕ ಕ್ಷೀರಾಭಿಷೇಕ, ಚಂಡಿಪಾರಾಯಣ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ಈ ವರ್ಷದ ಜಾತ್ರಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಪ್ರತಿ 5ವರ್ಷಕ್ಕೊಮ್ಮೆ ದೇವಿಯ ಜಾತ್ರೆ ನೆರವೇರಿಸಲು ಸಮಿತಿಯವರು ನಿರ್ಧರಿಸಿದ್ದಾರೆ. ಶತಮಾನದ ಬಳಿಕ ಜಾತ್ರೆ ನಡೆದಿದ್ದರಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts