More

    ಶ್ರೀ ಕೇತೇಶ್ವರ ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ

    ರಾಣೆಬೆನ್ನೂರ: ಶ್ರೀ ಕೇತೇಶ್ವರ ಜ್ಯೋತಿಯಾತ್ರೆಗೆ ಸೋಮವಾರ ನಗರದಲ್ಲಿ ಸಡಗರದಿಂದ ಸ್ವಾಗತ ಕೋರಲಾಯಿತು.

    ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದಿಂದ ಹಲಗೇರಿ ಕ್ರಾಸ್​ನ ಮೇದಾರ ಓಣಿ ಮಲೆಯಮ್ಮದೇವಿ ದೇವಸ್ಥಾನವರೆಗೆ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

    ನಂತರ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅರುಣಕುಮಾರ ಪೂಜಾರ, ಮೇದಾರ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೂ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಸಮಾಜದ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಗ್ಗಟ್ಟಾಗಿ ಹೋರಾಡಬೇಕು ಎಂದರು.

    ಚಿತ್ರದುರ್ಗದ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಲಿಂಗನಾಯಕನಹಳ್ಳಿ ಚನ್ನವೀರಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸಿ.ಪಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

    ಜಿಲ್ಲಾಧ್ಯಕ್ಷ ನಾಗರಾಜ ಗುಡ್ಡದಹಳ್ಳಿ, ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ, ಸಮಾಜದ ಪ್ರಮುಖರಾದ ಯಮನಪ್ಪ ಅಯ್ಯಪ್ಪನವರ, ನಾಗರಾಜ ಲಿಂಗದಹಳ್ಳಿ, ಎಂ.ಕೆ. ಹುಲಗಪ್ಪ, ಜಿ. ಲಕ್ಷ್ಮಣ, ಪ್ರಕಾಶ ಅಬ್ಬಿಗೇರಿ, ನಾಗರಾಜ ಗುಡ್ಡದಳ್ಳಿ, ಭರಮೇಶ ದೊಡ್ಡಮನಿ, ಅ.ಸಿ. ಹಿರೇಮಠ, ಚೋಳಪ್ಪ ಕಸವಾಳ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts