More

    ಶ್ರಮಿಕ್ ರೈಲಿನಲ್ಲಿ ಬಂದ 1241 ವಲಸಿಗರು

    ಕಲಬುರಗಿ: ಮುಂಬೈನಿಂದ ನಗರಕ್ಕೆ ಶುಕ್ರವಾರ ಬೆಳಗ್ಗಿನ ಜಾವ ಶ್ರಮಿಕ್ ಎಕ್ಸ್ಪ್ರೆಸ್ ವಿಶೇಷ ರೈಲಿನ ಮೂಲಕ 1241 ವಲಸಿಗರು ಬಂದಿದ್ದು, ಈ ಪೈಕಿ ಯಾದಗಿರಿ ಜಿಲ್ಲೆ 345 ಹಾಗೂ ಮಹಾರಾಷ್ಟ್ರ ಅಕ್ಕಲಕೋಟೆಯ 4 ಮಂದಿ ಸೇರಿದ್ದಾರೆ.
    ಕಲಬುರಗಿ ಜಿಲ್ಲೆಯ 892 ವಲಸಿಗರ ಪೈಕಿ 843 ಮಂದಿ ಚಿತ್ತಾಪುರ, ಶಹಾಬಾದ್ 17, ಜೇವರ್ಗಿ 11, ಕಲಬುರಗಿ 9, ಅಫಜಲಪುರ 5, ಅಳಂದ 4, ಚಿಂಚೋಳಿ 2 ಹಾಗೂ ಸೇಡಂ ತಾಲೂಕಿನ ಒಬ್ಬರು ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
    ಎಲ್ಲ ವಲಸಿಗರಿಗೂ ರೈಲು ನಿಲ್ದಾಣದಲ್ಲಿ ಕೋವಿಡ್ ಆರೋಗ್ಯ ತಪಾಸಣೆ (ಸ್ಕ್ರೀನಿಂಗ್) ಮಾಡಿಸಿ ಆಯಾ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿದೆ. ಚಿತ್ತಾಪುರ 16, ನಾಲವಾರ 3, ಯಾದಗಿರಿ 13 ಸೇರಿ 39 ಈಶಾನ್ಯ ಸಾರಿಗೆ ಬಸ್ಗಳ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ.
    2393 ಮಂದಿ ಆಗಮನ: 11ರಂದು ಥಾಣೆಯಿಂದ 1152 ಮತ್ತು 14ರಂದು ಮುಂಬೈನಿಂದ 1241 ಮಂದಿ ಬಂದಿದ್ದು, ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ಮಹಾರಾಷ್ಟ್ರ ದ ಅಕ್ಕಲಕೋಟ ಸೇರಿ 2,393 ವಲಸಿಗರು ಈವರೆಗೆ ಕಲಬುರಗಿ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಉಭಯ ರೈಲುಗಳಲ್ಲಿ ಕರೆತರಲಾದ ಕಲಬುರಗಿ ಜಿಲ್ಲೆಯ 1770 ಜನರನ್ನು ಆಯಾ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಇಟ್ಟು ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts