More

    ಶ್ರದ್ಧೆ, ಏಕಾಗ್ರತೆಯಿಂದ ಗುರಿ ತಲುಪಲು ಸಾಧ್ಯ

    ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಶ್ರದ್ಧೆ, ಏಕಾಗ್ರತೆಯಿಂದ ವ್ಯಾಸಂಗ ಮಾಡಿದರೆ ಅಂದುಕೊಂಡ ಗುರಿ ಸಾಸಲು ಸಾಧ್ಯವಾಗುತ್ತದೆ ಎಂದು ಐಗಳಿ ಪಿಎಸ್‌ಐ ಸುಮಲತಾ ಆಸಂಗಿ ಹೇಳಿದರು.


    ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಉದ್ಯೋಗ ಭರವಸೆ ಕೋಶದಡಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ಬಹುತೇಕ ಪಾಲಕರು ಮಕ್ಕಳ ಎಲ್ಲ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತಾರೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಗುರಿ ತಲುಪಬೇಕು. ಶಿಕ್ಷಣದೊಂದಿಗೆ ಸಂಸ್ಕಾರವೂ ಅಳವಡಿಸಿಕೊಳ್ಳಬೇಕು ಎಂದರು.


    ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ ಮಾತನಾಡಿ, ಓದುವ ಮನಸ್ಸಿದ್ದರೆ ಅಂದುಕೊಂಡಿದ್ದನ್ನು ಸಾಸಬಹುದು. ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.


    ಪ್ರಾಚಾರ್ಯ ಸಿದ್ರಾಮ ಯರನಾಳ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ಪಾಟೀಲ, ಡಾ.ಸತೀಶ ಮೋಹಿತೆ, ರಾಜೇಶ ಜಾಧವ, ಪರಪ್ಪ ಮಗದುಮ್ಮ, ಸತೀಶ ಪಾಳೆಗಾರ, ಕುಮಾರ ತಕತರಾವ, ಶ್ರೀಕಾಂತ ಜಾಧವ, ಕೆ.ಟಿ. ಚೆಡಚಾಳೆ, ಭಾರತಿ ಪಾಟೀಲ, ಶೈಲಜಾ ತುಬಚಿ, ಲಕ್ಷ್ಮೀ ಆರ್, ಡಾ.ಪ್ರಭಾಕರ ಛಾಡಿ, ಕಪಿಲ ಕಾಂಬಳೆ, ವೈಷ್ಣವಿ ಹಿರೇಮಠ, ಶಬಾನಾ ಮುಜಾವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts