More

    ಶೌರ್ಯ ಪ್ರಶಸ್ತಿ ವಿಜೇತ ದೀಕ್ಷಿತ್‌ಗೆ ಅಭಿನಂದನೆ

    ಶನಿವಾರಸಂತೆ: ಮನುಷ್ಯ ಸಾರ್ಥಕತೆಯ ಜೀವನ ಸಾಗಿಸಬೇಕೆಂದರೆ ಮತ್ತೊಬ್ಬರ ಹಿತ ಬಯಸಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಅಭಿಪ್ರಾಯಪಟ್ಟರು.

    2022-23ನೇ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ ಕೂಡ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿ ದೀಕ್ಷಿತ್‌ಗೆ ಸಮೀಪದ ಬೆಸೂರು ನ್ಯಾಯದಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಸೂರು ಕ್ಲಸ್ಟರ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಪ್ರಸ್ತುತ ಸಮಾಜದಲ್ಲಿ ಅಧಿಕಾರ, ಆಸ್ತಿ ಅಂತಸ್ತು, ಶ್ರೀಮಂತಿಕೆಯನ್ನು ಮೆರೆಯುತ್ತಾರೆ. ಆದರೆ ಇದು ಯಾವುದು ಮುಖ್ಯವಾಗುವುದಿಲ್ಲ. ಅಸೂಯೆ, ಸ್ವಾರ್ಥ ಇಲ್ಲದೆ ಮತ್ತು ಶಾಂತಿ ಸಹಬಾಳ್ವೆ ಜೀವನದಿಂದ ಸಾರ್ಥಕತೆಯನ್ನು ಮೆರೆಯಬಹುದು ಎಂದರು.

    ಮಕ್ಕಳಲ್ಲಿ ದೈವಿಕತೆ ಇರುತ್ತದೆ. ಮಕ್ಕಳ ಚೈತನ್ಯ ಶಕ್ತಿಗೆ ದೊಡ್ಡವರು ತಲೆಬಾಗಬೇಕು. ಈ ನಿಟ್ಟಿನಲ್ಲಿ ಈ ಶಾಲೆಯ ವಿದ್ಯಾರ್ಥಿ ದೀಕ್ಷಿತ್‌ನ ಧೈರ್ಯ, ಮುಂದಾಲೋಚನೆ, ಪ್ರಬುದ್ಧತೆಯನ್ನು ನಾವೆಲ್ಲರೂ ಮೆಚ್ಚಬೇಕು. ಇತರ ವಿದ್ಯಾರ್ಥಿಗಳು ಈತನನ್ನು ಮಾದರಿಯಾಗಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

    ಬೆಸೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಾನ್‌ಪಾಲ್ ಡಿಸೋಜ ಪ್ರಾಸ್ತವಿಕವಾಗಿ ಮಾತನಾಡಿ, ಕೂಡ್ಲೂರು ಶಾಲೆಯ ಧೀರ ಬಾಲಕ ದೀಕ್ಷಿತ್ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನರಾಗಿರುವುದು ಶಿಕ್ಷಣ ಇಲಾಖೆ, ವಿದ್ಯಾರ್ಥಿ ಸಮೂಹ ಹೆಮ್ಮೆ ಪಡುವ ವಿಷಯವಾಗಿದ್ದು ಈ ನಿಟ್ಟಿನಲ್ಲಿ ಕ್ಲಸ್ಟರ್ ಮತ್ತು ಶಿಕ್ಷಕರ ಸಮೂಹ ಈ ಬಾಲಕನಿಗಾಗಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

    ಶೌರ್ಯ ಪ್ರಶಸ್ತಿ ವಿಜೇತ ಬಾಲಕ ದೀಕ್ಷಿತ್‌ನನ್ನು ಈ ವೇಳೆ ಅಭಿನಂದಿಸಲಾಯಿತು. ಕೂಡ್ಲೂರು ಶಾಲೆಯ ಶಿಕ್ಷಕಿ ಸ್ನೇಹಾ ಬಸಮ್ಮ, ರಾಧಾ, ರುಕ್ಮಿಣಿ ಅವರನ್ನು ಸನ್ಮಾನಿಸಲಾಯಿತು. ನ್ಯಾಯದಹಳ್ಳ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಬೆಸೂರು ವೃತ್ತದಿಂದ ದೀಕ್ಷಿತ್‌ನನ್ನು ಪಾಲಕರೊಂದಿಗೆ ತೆರೆದ ವಾಹನದಲ್ಲಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಪೂರ್ಣಕುಂಭ, ವಾದ್ಯಗೋಷ್ಠಿಸ್ವಾಗತದೊಂದಿಗೆ ವೇದಿಕೆಗೆ ಕರೆತರಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts