More

    ಶೌಚಗೃಹ ನಿರ್ವಾಹಕರಿಗೆ ನೋಟಿಸ್ ಜಾರಿ

    ಧಾರವಾಡ: ನಗರದ ಸಿಬಿಟಿ ಪಕ್ಕದಲ್ಲಿರುವ ಶೌಚಗೃಹವನ್ನು ಪುಟಾಣಿ ಮಕ್ಕಳಿಂದ ಸ್ವಚ್ಛಗೊಳಿಸಿರುವ ಹಿನ್ನೆಲೆಯಲ್ಲಿ ಶೌಚಗೃಹ ನಿರ್ವಾಹಕರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಸೋಮವಾರ ನೋಟಿಸ್ ಜಾರಿ ಮಾಡಲಾಗಿದೆ.

    ಮಕ್ಕಳು ಶೌಚಗೃಹ ಸ್ವಚ್ಛಗೊಳಿಸಿದ ಕುರಿತು ‘ವಿಜಯವಾಣಿ’ ದಿನಪತ್ರಿಕೆಯ ಅ. 5ರ ಸಂಚಿಕೆಯ ಅಯ್ಯೋ ಪ್ರಾಬ್ಲಂ ಕಣ್ರೀ ವಿಭಾಗದಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು. ಈ ವರದಿಯನ್ನು ಗಮನಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕಾರ್ವಿುಕ ಇಲಾಖೆ ಅಧಿಕಾರಿಗಳು ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ರಾಂತೇಶಕುಮಾರ ಝಾ ಎಂಬುವವರಿಗೆ ನೋಟಿಸ್ ನೀಡಿದ್ದಾರೆ.

    ಬಾಲ ಕಾರ್ವಿುಕ ನಿಷೇಧ ಕಾಯ್ದೆ ಅಡಿ ಈ ಕೃತ್ಯ ಅಪರಾಧ. 1986ರ ಬಾಲಕಾರ್ವಿುಕ ಹಾಗೂ ಕಿಶೋರ ಕಾರ್ವಿುಕ (ನಿಷೇಧ ನಿಯಂತ್ರಣ) ತಿದ್ದುಪಡಿ ಕಾಯ್ದೆ 2016ಅನ್ವಯ 2 ವರ್ಷ ಜೈಲು ಹಾಗೂ 5,00,000 ರೂ. ದಂಡವಿದೆ. ಆದಾಗ್ಯೂ ಮಕ್ಕಳಿಂದ ಸ್ವಚ್ಛತೆ ಕಾರ್ಯ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ನೋಟಿಸ್ ಜಾರಿ ಮಾಡಿದ್ದಾರೆ.

    ಅ. 6ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆವರಣದಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಿಚಾರಣೆಗೆ ಹಾಜರಾಗುವಂತೆ ಶೌಚಗೃಹ ನಿರ್ವಹಣೆ ಹೊತ್ತಿರುವ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts