More

    ಎಸ್ಸೆಸ್ಸೆಲ್ಸಿ `ಸಿ’ (ಛೀ) ಗ್ರೇಡ್ಗೆ ಗಿರಿ ಜಿಲ್ಲೆ

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ವಿದ್ಯಾಥರ್ಿ ಜೀವನದ ಪ್ರಮುಖ ಘಟ್ಟ ಎನಿಸಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲೇ (34) ಕೊನೇ ಸ್ಥಾನ ಪಡೆದುಕೊಳ್ಳುವ ಮೂಲಕ ಶೈಕ್ಷಣಿಕ ವ್ಯವಸ್ಥೆ ಮತ್ತೆ ಪ್ರಶ್ನಿಸುವಂತೆ ಮಾಡಿದೆ.

    ಸೋಮವಾರ ಹೊರಬಿದ್ದ ಫಲಿತಾಂಶದಲ್ಲಿ ಜಿಲ್ಲೆ ಸಿ ಗ್ರೇಡ್ಗೆ ಇಳಿದಿರುವುದು ಒಂದೆಡೆಯಾದರೆ, ರಿಸಲ್ಟ್ ಪ್ರಕಟಗೊಂಡು 24 ತಾಸು ಕಳೆದರೂ ವಿವರವಾದ ಮಾಹಿತಿ ನೀಡುವಲ್ಲಿ ಶಿಕ್ಷಣ ಇಲಾಖೆ ಎಡವಿದ್ದು, ಶಿಕ್ಷಣ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಈ ಬಾರಿ ಕೋವಿಡ್-19 ಆತಂಕದ ಮಧ್ಯೆ ವಿದ್ಯಾಥರ್ಿಗಳು ಪರೀಕ್ಷೆ ಎದುರಿಸಿದ್ದರೂ ಉತ್ತಮ ಫಲಿತಾಂಶದ ನಿರೀಕ್ಷೆ ಇತ್ತು. 17,396 ಮಕ್ಕಳು ಪರೀಕ್ಷೆ ಬರೆದಿದ್ದು, ಇವರಲ್ಲಿ ಪಾಸಾದವರ ಸಂಖ್ಯೆ ಎಷ್ಟು ಎಂಬ ಬಗ್ಗೆ ಶಿಕ್ಷಣ ಇಲಾಖೆಯಿಂದ ಅಧಿಕೃತ ಮಾಹಿತಿ ಸಿಗದಿರುವುದು ದುರಂತದ ಸಂಗತಿ.

    ಸರ್ಕಾರಿ ವಸತಿ ಶಾಲೆ ಟಾಪರ್: ಪರೀಕ್ಷೆಯಲ್ಲಿ ಜಿಲ್ಲೆಯ ವಸತಿಶಾಲೆ ವಿದ್ಯಾಥರ್ಿಗಳು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಶಹಾಪುರದ ಆದರ್ಶ ವಿದ್ಯಾಲಯದ ರಮ್ಯಾ 625ಕ್ಕೆ 620, ಸ್ವಪ್ನಾ ಹೆಳವಾರ 619 ಅಂಕ ಪಡೆದಿದ್ದಾರೆ. ಇನ್ನು ಯಾದಗಿರಿಯ ಆರ್ವಿ ಶಾಲೆಯ ಪ್ರಿಯದಶರ್ಿನಿ 617 ಹಾಗೂ ಮಹಾತ್ಮಗಾಂಧಿ ಶಾಲೆಯ ಸುಷ್ಮಾ 617 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಕೀತರ್ಿ ತಂದಿರುವುದು ಕೊಂಚ ಸಮಾಧಾನ ಮೂಡಿಸಿದೆ.

    ಜಿಲ್ಲಾ ಪಂಚಾಯಿತಿ ವತಿಯಿಂದ ಸಕರ್ಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಹೇಳಿಕೊಳ್ಳುವಂಥ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂಬ ವಿಶ್ಲೇಷಣೆ ನಡೆಯುತ್ತಿದ್ದು, ಜನಪ್ರತಿನಿಧಿಗಳು ಕೂಡ ಪಿಯಸಿ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯತ್ತ ಹೆಚ್ಚಿನ ಒತ್ತು ನೀಡುವಲ್ಲಿ ಎಡವಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts