More

    ಶೇಡಬರಿ ಜಟಕಾ ಮಹಾಸತಿ ದೇವಿ ಜಾತ್ರೆಗೆ ಚಾಲನೆ

    ಭಟ್ಕಳ: ತಾಲೂಕಿನ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ಸುಪ್ರಸಿದ್ಧ ಶೇಡಬರಿ ಜಟಕಾ ಮಹಾಸತಿ ದೇವಿಯ ಜಾತ್ರೆಗೆ ಗಡಿ ದೇವರ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಶುಕ್ರವಾರ ಚಾಲನೆ ನೀಡಲಾಯಿತು.

    ಶೇಡಿ ಎಂದರೆ ಮಣ್ಣಿನಿಂದ ಕೂಡಿರುವುದು. ಬರಿ ಎಂದರೆ ಇಳಿಜಾರು ಪ್ರದೇಶ. ಈ ಪ್ರದೇಶದಲ್ಲಿ ಪ್ರತಿಷ್ಠಾಪನೆಗೊಂಡ ದೇವಿಗೆ ಶೇಡಬರಿ ಮಹಾಸತಿ ದೇವಿ ಎಂದು ಕರೆಯುತ್ತಾರೆ. ಜಾತ್ರೆಯ ಆರಂಭದ ಅಂಗವಾಗಿ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಜಟಕಾ ಮಹಾಸತಿ ದೇವಿಕೆ ವಿಶೇಷ ಪೂಜೆ ಸಲ್ಲಿಸಿದರು.

    ಮಕ್ಕಳಾಗದವರು, ಕಷ್ಟ ತೀರಿಸುವಂತೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ತಕ್ಷಣ ಶೇಡಬರಿ ಮರ ಏರಿ, ಒಂದು ಸುತ್ತು ತಿರುಗಿಸಿ ಹರಕೆ ಒಪ್ಪಿಸುವುದು ವಾಡಿಕೆ. ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ತಮ್ಮ ಸೇವೆ ಅರ್ಪಿಸಿ ಕೃತಾರ್ಥರಾದರು.

    ಈ ದೇವಸ್ಥಾನಕ್ಕೆ 100 ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಜಾತ್ರೆಯ 7 ದಿನಗಳ ಮುನ್ನವೇ ದೇವಸ್ಥಾನದ ಸುತ್ತಲಿನ ನೂರಕ್ಕೂ ಹೆಚ್ಚು ಗಡಿ ದೇವರುಗಳಿಗೆ ಚರು ಹಾಕಿ ಸಂತುಷ್ಠಗೊಳಿಸಿ ಜಾತ್ರೆ ಆರಂಭಿಸುವುದು ವಾಡಿಕೆ. ಇದರಂತೆ 7 ದಿನಗಳ ಹಿಂದೆಯೇ ಈ ವಿಧಿವಿಧಾನಗಳನ್ನು ಶೇಡಬರಿ ಆಡಳಿತ ಮಂಡಳಿ ಅವರು ಪೂರೈಸಿ ಜಾತ್ರೆಗೆ ಅಣಿಗೊಳಿಸಲಾಗಿದೆ.

    ಶನಿವಾರ ಕೂಡ ಶೇಡಬರಿ ಜಾತ್ರೆ ನಡೆಯಲಿದ್ದು, ಆ ಪ್ರಯುಕ್ತ ಯಕ್ಷಗಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts