More

    ಶೆಟ್ಟಿಕೇರಿಯಲ್ಲಿ ಬಗೆಹರಿದ ರಸ್ತೆ ವಿವಾದ

    ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರ ಗ್ರಾಪಂ ವ್ಯಾಪ್ತಿಯ ಶೆಟ್ಟಿಕೇರಿ ಗ್ರಾಮದಲ್ಲಿನ ರೈತ ಸಂಪರ್ಕ ರಸ್ತೆ ಕುರಿತ ಮೂರ್ನಾಲ್ಕು ವರ್ಷಗಳ ವಿವಾದವನ್ನು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ನೇತೃತ್ವದಲ್ಲಿ ಗುರುವಾರ ಇತ್ಯರ್ಥಪಡಿಸಲಾಯಿತು.

    ಶೆಟ್ಟಿಕೇರಿ-ನಿಟ್ಟೂರ ರೈತ ಸಂಪರ್ಕ ರಸ್ತೆ ಕುರಿತು ಗ್ರಾಮದ ರೈತರಲ್ಲಿ ಆಗಾಗ ತಂಟೆ-ತರಕಾರು ಸಾಮಾನ್ಯವಾಗಿದ್ದವು. ಕೆಲ ರೈತರು ಈ ಮಾರ್ಗದಲ್ಲಿ ಹಾದು ಹೋಗುವ ರೈತರಿಗೆ ‘ಇಲ್ಲಿ ರಸ್ತೆ ಇಲ್ಲ. ಎತ್ತು, ಚಕ್ಕಡಿ, ಟ್ರಾ್ಯಕ್ಟರ್, ಇನ್ನಿತರ ವಾಹನ ತೆಗೆದುಕೊಂಡು ಹೋಗಲು ಬಿಡುವುದಿಲ್ಲ’ ಎಂದು ಅಡ್ಡಿಪಡಿಸುತ್ತಿದ್ದರು. ಇದರಿಂದ ರೈತರು ಕೃಷಿ ಕಾರ್ಯಕ್ಕೆ ಹೋಗಲು ತೊಂದರೆಪಡಬೇಕಾಗಿತ್ತು. ಈ ಸಂಬಂಧ ಆಗಾಗ್ಗೆ ರೈತರಲ್ಲಿ ಸಣ್ಣಪುಟ್ಟ ಜಗಳ ನಡೆಯುತ್ತಿದ್ದವು. ಹೀಗಾಗಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ತಹಸೀಲ್ದಾರರಿಗೆ ರೈತರು ಮನವಿ ಸಲ್ಲಿಸಿದ್ದರು.

    ತಹಸೀಲ್ದಾರ್ ಗುಬ್ಬಿಶೆಟ್ಟಿ, ಗುರುವಾರ ಸರ್ವೆ ಇಲಾಖೆ ಸಿಬ್ಬಂದಿ, ಪೊಲೀಸ್, ಕಂದಾಯ ಇಲಾಖೆ ಮತ್ತು ಗ್ರಾಮದ ಮುಖಂಡರ ಸಮ್ಮುಖದಲ್ಲಿ ಅಳತೆ ಮಾಡಿಸಿ ದಾಖಲೆಯಲ್ಲಿರುವಂತೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ರೈತರಿಗೆ ಎಚ್ಚರಿಕೆ ನೀಡಿದರು.

    ಸಿಪಿಐ ವಿಕಾಸ ಪಿ.ಎಲ್., ಪಿಎಸ್​ಐ ಶಿವಯೋಗಿ ಲೋಹಾರ, ಗ್ರಾಪಂ ಅಧ್ಯಕ್ಷ ಸೋಮಶೇಖರಯ್ಯ ಶಿಗ್ಲಿಮಠ, ಸದಸ್ಯರಾದ ಫಕೀರಪ್ಪ ಕುಸಲಾಪುರ, ಹನಮಂತಪ್ಪ ಹರಿಜನ, ದೀಪಕ ಲಮಾಣಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಗ್ರಾಮ ಲೆಕ್ಕಾಧಿಕಾರಿ ಗುರುರಾಜ ಹವಳದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts