More

    ಶುಲ್ಕ ಪಾವತಿಗೆ ಒತ್ತಾಯ

    ಕಾರವಾರ: ಕರೊನಾ ಸೋಂಕಿನ ಭಯದಲ್ಲಿ ಇದುವರೆಗೂ ಶಾಲೆ- ಕಾಲೇಜ್​ಗಳ ಪ್ರಾರಂಭ ಅನಿಶ್ಚಿತವಾಗಿದೆ. ಆದರೆ, ಈ ನಡುವೆ ಕೆಲ ಖಾಸಗಿ ಶಾಲೆಗಳು ಪಾಲಕರಿಂದ ಒತ್ತಾಯಪೂರ್ವಕವಾಗಿ ಶುಲ್ಕ ವಸೂಲಿಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ.

    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಪಾಲಕರಿಂದ ಶುಲ್ಕ ವಸೂಲಿ ಮಾಡಬಾರದು ಎಂದು ಮೊದಲು ಸರ್ಕಾರ ಆದೇಶ ಹೊರಡಿಸಿತ್ತು. ಏ. 28ರಂದು ಮರು ಸುತ್ತೋಲೆಯೊಂದನ್ನು ಹೊರಡಿಸಿ, ಶಿಕ್ಷಕರ ವೇತನ ದೃಷ್ಟಿಯಿಂದ ನಿಯಮ ಸಡಿಲಿಸಿದ್ದು, ಕೊಡಲು ಇಷ್ಟವಿದ್ದವರಿಂದ, ಆರ್ಥಿಕವಾಗಿ ಸಮರ್ಥರಿಂದ ಶುಲ್ಕ ಪಡೆಯಬಹುದು ಎಂದು ತಿಳಿಸಿದೆ. ಆದರೆ, ಒತ್ತಾಯ ಮಾಡಬಾರದು ಎಂದು ಸೂಚಿಸಿದೆ.

    2018ರ ಒಂದು ಸುತ್ತೋಲೆಯಂತೆ ಪ್ರತಿ ವರ್ಷ ಶೇ. 15 ರಷ್ಟು ಬೋಧನಾ ಶುಲ್ಕ ಹೆಚ್ಚಳಕ್ಕೆ ಅವಕಾಶವಿದ್ದರೂ 2020-21ನೇ ಸಾಲಿನಲ್ಲಿ ಕರೊನಾ ಲಾಕ್​ಡೌನ್​ನಿಂದ ಪಾಲಕರು ತೊಂದರೆಯಲ್ಲಿರುವುದರಿಂದ ಈ ಶೈಕ್ಷಣಿಕ ವರ್ಷಕ್ಕೆ ಯಾವುದೇ ಶುಲ್ಕ ಹೆಚ್ಚಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ಆದರೆ, ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಾರವಾರ ನಗರದ ಕೆಲ ಪ್ರಮುಖ ಶಾಲೆಗಳು ಪಾಲಕರಿಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸಿ ಶುಲ್ಕ ವಸೂಲಿ ಪ್ರಾರಂಭಿಸಿವೆ. ಈಗ ಶುಲ್ಕ ತುಂಬದಿದ್ದರೆ ಸೀಟ್ ಸಿಗದು ಎಂದು ಎಚ್ಚರಿಸುತ್ತಿವೆ.

    ಜೂನ್ 1ರಿಂದ ಶುಲ್ಕ ಪಾವತಿ ನಡೆಯಲಿದ್ದು, ರೋಲ್ ನಂಬರ್ ಪ್ರಕಾರ ಶುಲ್ಕ ವಸೂಲಿಯ ವೇಳಾಪಟ್ಟಿಯನ್ನು ಹಾಕಲಾಗಿದೆ.

    ಇನ್ನೊಂದು ಶಾಲೆಯು ಕಳೆದ ವರ್ಷಕ್ಕಿಂತ ಮೂರ್ನಾಲ್ಕು ಸಾವಿರ ರೂ. ಶುಲ್ಕ ಹೆಚ್ಚಿಸಿ, ತುಂಬಲು ಪಾಲಕರಿಗೆ ಸಂದೇಶ ಕಳುಹಿಸಿದೆ. ಈಗಾಗಲೇ ಲಾಕ್​ಡೌನ್ ಸಂಕಷ್ಟದಿಂದ ಉದ್ಯಮ, ವ್ಯಾಪಾರ, ಸಮರ್ಪಕ ವೇತನ ಇಲ್ಲದೆ ಪರಿತಪಿಸುತ್ತಿರುವ ಪಾಲಕರಿಗೆ ಶಾಲೆಯ ಶುಲ್ಕ ಹೆಚ್ಚಳವು ಆತಂಕಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts