More

    ಶಿಲ್ಪಕಲೆಗೆ ಜಕಣಾಚಾರಿ ಕೊಡುಗೆ ಅನನ್ಯ

    ಯಾದಗಿರಿ: ಜಗತ್ತಿಗೆ ಅದ್ಭುತ ಶಿಲ್ಪಕಲೆ ಪರಿಚಯಿಸಿದವರು ಅಮರಶಿಲ್ಪಿ ಜಕಣಾಚಾರಿ. 11ನೇ ಶತಮಾನದ ಅವರ ಶಿಲ್ಪಕಲೆಯನ್ನು ಇಂದಿಗೂ ಸರಿಗಟ್ಟಲು ಅಥವಾ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ತಿಳಿಸಿದರು.

    ನಗರದ ವಿದ್ಯಾಮಂಗಲದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಜಕಣಾಚಾರಿ ಅವರು ಬೇಲೂರಿನಲ್ಲಿ ಒಳ್ಳೆಯ ಮೂತರ್ಿಗಳ ಕೆತ್ತನೆ ಕೆಲಸಕ್ಕಾಗಿ ನೇಮಿಸಲ್ಪಟ್ಟರು. ನಾಡಿನ ಶಿಲ್ಪಕಲಾ ಕ್ಷೇತ್ರಕ್ಕೆ ಅವರಂಥ ಕೊಡಿಗೆ ನೀಡಿದ ಮತ್ತೊಬ್ಬ ಶಿಲ್ಪಿ ಸಿಗಲು ಸಾಧ್ಯವಿಲ್ಲ ಎಂದರು.

    ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರು ಶಿಲ್ಪಕಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ವಿಷ್ಣುವರ್ಧನ ಅರಸನ ಕಾಲದಲ್ಲಿ ಶಿಲ್ಪಕಲೆಯು ಉತ್ತುಂಗ ಶಿಖರದಲ್ಲಿತ್ತು ಎಂದು ತಿಳಿಸಿದರು. ಆ ಕಾಲಘಟ್ಟದಲ್ಲಿ ಅಮರಶಿಲ್ಪಿ ಜಕಣಾಚಾರಿ ಬೇಲೂರು ಮತ್ತು ಹಳೆಬೀಡಿನ ದೇವಾಲಯದಲ್ಲಿ ಶಿಲ್ಪಿಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ ಅವರು ಇಡೀ ಜೀವನವನ್ನು ಶಿಲ್ಪ ಕಲೆಗೆ ಮೀಸಲಿಟ್ಟಿದ್ದರು ಎಂದರು.

    ವಿಶೇಷ ಉಪನ್ಯಾಸ ನೀಡಿದ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ, ಜಕಣಾಚಾರಿ ಶ್ರೇಷ್ಠ ಶಿಲ್ಪಿ. ಇತಿಹಾಸದ ಮೂಲಕ ನಮಗೆ ಅವರ ಶಿಲ್ಪ ಕಲೆ ಬಗ್ಗೆ ತಿಳಿದಿದೆ. ಇಂದಿಗೂ ಬೇಲೂರು, ಸೋಮನಾಥ ದೇವಾಲಯ, ಹಳೇಬೀಡುಗಳಲ್ಲಿ ಅವರ ಕೆತ್ತನೆ ಕುಸರಿ ಗಮನಿಸಬಹುದು. ಪೂರ್ಣ ಶ್ರದ್ಧೆ ಮತ್ತು ತನ್ಮಯತೆಯಿಂದ ಮಾತ್ರ ಅಂತಹ ಶಿಲ್ಪಗಳನ್ನು ರಚಿಸಲು ಸಾಧ್ಯ. ಅವರಂತೆ ಎಲ್ಲರೂ ತಮ್ಮ ತಮ್ಮ ಕಾಯಕದಲ್ಲಿ ನಿಷ್ಠೆ ಹೊಂದಬೇಕಿದೆ ಎಂದು ಹೇಳಿದರು.

    ವಿಶ್ವಕರ್ಮ ಸಮಾಜದ ಮುಖಂಡರಾದ ಮಹೇಶ ತಡಿಬಿಡಿ, ಬಸವರಾಜ ಸೈದಾಪೂರ, ಚಂದ್ರಶೇಖರ ಪತ್ತಾರ, ಮೌನೇಶ, ಬನ್ನಪ್ಪ ಕಾಳೆಬಳಗುಂದಿ, ಮೊನಪ್ಪ ವಿರ್ಶಕರ್ಮ, ರಾಜಶೇಖರ, ಶಿವಾನಂದ ದೇವಿಂದ್ರಪ್ಪ ಇಲಾಖೆಯ ಸಹಾಯಕ ನಿದರ್ೇಶಕಿ ಉತ್ತರಾದೇವಿ ಮಠಪತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts