More

    ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಗೆ ಬೆಂಬಲ ಕೋರಿಕೆ

    ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆಯಾಗುವ ಜತೆಗೆ ಬನವಾಸಿ ಪ್ರತ್ಯೇಕ ತಾಲೂಕು ಕೇಂದ್ರ ಆಗಬೇಕೆಂಬ ಹೋರಾಟ ಬೆಂಬಲಿಸಲು ಶಿರಸಿ ಜಿಲ್ಲಾ ಹೋರಾಟ ಸಮಿತಿ ಹಾಗೂ ಬನವಾಸಿ ತಾಲೂಕು ಹೋರಾಟ ಸಮಿತಿಯ ಪ್ರಮುಖರು ಜಂಟಿಯಾಗಿ ಶನಿವಾರ ಬನವಾಸಿ ಭಾಗದ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಂಘಟನೆಗಳ ಪ್ರಮುಖರನ್ನು ಭೇಟಿ ಮಾಡಿ ಮನವಿ ಮಾಡಿದರು.

    ಈ ವೇಳೆ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಫಾದರ್ ಆಲ್ವಿನ್ ಡೆಸಾ ಮಾತನಾಡಿ, ಬನವಾಸಿಯಿಂದ ಕಾರವಾರಕ್ಕೆ 140 ಕಿ.ಮೀ. ದೂರ ಆಗುತ್ತದೆ. ಇದು ಜನರಿಗೆ ತುಂಬಾ ತೊಂದರೆ ಹಾಗೂ ದೂರ ಪ್ರಯಾಣವಾಗಿದೆ. ಹಾಗಾಗಿ ಶಿರಸಿ ಪ್ರತ್ಯೇಕ ಜಿಲ್ಲೆಯಾಗುವುದು ತುಂಬಾ ಸೂಕ್ತ ಎಂದರು. ಬನವಾಸಿಗೆ ತನ್ನದೆಯಾದ ಘನತೆ, ಗೌರವ ಇದೆ. ಐತಿಹಾಸಿಕ ಕ್ಷೇತ್ರ ಬನವಾಸಿ ಕೂಡ ಪ್ರತ್ಯೇಕ ತಾಲೂಕಾಗಬೇಕು, ಶ್ರೀಕ್ಷೇತ್ರ ಪರಿಗಣಿಸಿ ಬನವಾಸಿಗೆ ಪ್ರತ್ಯೇಕ ತಾಲೂಕು ಸ್ಥಾನಮಾನ ಸರ್ಕಾರ ನೀಡಲಿ ಎಂದರು.

    ಬನವಾಸಿಯ ಅಹಲೆ ಸುನ್ನತ್ ಜಮಾತ್​ನ ಅಧ್ಯಕ್ಷ ಹಪೀಜರ್ ರೆಹಮಾನ, ಕಾರ್ಯದರ್ಶಿ ಆಶ್ಪಾಕ್ ಅಲಿ, ಅಹಲೇ ಹದೀಸ್​ನ ಅಧ್ಯಕ್ಷ ಮಹಮ್ಮದ್ ಅಸ್ಲಾಂ ಅಬ್ದುಲ್ ರವೂಫ್ ಶೇಖ್, ಕಾರ್ಯದರ್ಶಿ ಅಬ್ದುಲ್ ಮತೀನ ಅವರನ್ನು ಭೇಟಿಯಾಗಿ ಸಮಾಜದ ಬೆಂಬಲ ಕೋರಲಾಯಿತು.ಈ ವೇಳೆ ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಕಾರ್ಯದರ್ಶಿ ಎಂ.ಎಂ. ಭಟ್ಟ ಕಾರೆಕೊಪ್ಪ, ಬನವಾಸಿ ತಾಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ.ಎಫ್. ನಾಯ್ಕ, ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ಕಾರ್ಯದರ್ಶಿ ವಿಶ್ವನಾಥ ಒಡೆಯರ್, ವಿಶ್ವನಾಥ ಹಾದಿಮನಿ ಎಡೂರಬೈಲ್, ಗಣಪತಿ ನಾಯ್ಕ ಪಾತಾಳಿ, ಭೂಷಣ ರಾಕುಂಡೆ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts