More

    ಶಿರಸಿಯಲ್ಲಿ ಆಲಿಕಲ್ಲು ಮಳೆ

    ಶಿರಸಿ: ಬಿಸಿಲಿಗೆ ಸುಡುತ್ತಿದ್ದ ನಗರ ಹಾಗೂ ಗ್ರಾಮೀಣ ಭಾಗದ ವಾತಾವರಣ ಶುಕ್ರವಾರ ಬಿದ್ದ ಮೊದಲ ಮಳೆಗೆ ತಂಪಾಯಿತು. ಗಂಟೆಗೂ ಅಧಿಕ ಕಾಲ ನಗರ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಆಲಿಕಲ್ಲು ಸಹಿತ ಹದವಾದ ಮಳೆ ಸುರಿಯಿತು. ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಗುಡುಗು ಸಹಿತ ಬಿದ್ದ ಮಳೆಗೆ ಭೂಮಿ ತಂಪಾಯಿತು. ಚಿಕ್ಕ ಗಾತ್ರದ ಆಲಿಕಲ್ಲುಗಳು ಬಿದ್ದ ಕಾರಣ ವಾತಾವರಣಲ್ಲಿ ಶೀತ ಉಂಟಾಯಿತು. ವಾರದಿಂದೀಚೆಗೆ ಬಿಸಿಲಿನ ಧಗೆ ಹೆಚ್ಚಿದ್ದು, ಮಳೆಯ ಕಾರಣ ಸುಡುವ ವಾತಾವರಣ ತಂಪಾದಂತಾಗಿದೆ. ಕಳೆದ ವಾರವಷ್ಟೇ ತಾಲೂಕಿನ ದಾಸನಕೊಪ್ಪ ಭಾಗದಲ್ಲಿ ಇದೇ ರೀತಿ ಗುಡುಗು ಸಹಿತ ಮಳೆಯಾಗಿ ಸಿಡಿಲಿಗೆ 2 ತೆಂಗಿನ ಮರಗಳು ಹೊತ್ತಿ ಉರಿದಿದ್ದವು.

    ರಸ್ತೆ ಮೇಲೆ ಮುರಿದು ಬಿದ್ದ ಮರ: ಜೊಯಿಡಾ: ತಾಲೂಕು ಕೇಂದ್ರ ಜೊಯಿಡಾದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಆಲಿಕಲ್ಲು ಜೊತೆಗೆ ಜೋರಾದ ಗಾಳಿ ಮಳೆಯಾಗಿದ್ದು, ಒಂದಿಷ್ಟು ಮನೆಗಳಿಗೆ ಹಾನಿ ಕೂಡಾ ಸಂಭವಿಸಿದೆ. ಪೋಟೋಲಿಯಲ್ಲಿನ ವಿನಾಯಕ ದೇಸಾಯಿ ಮನೆ ಮೇಲೆ ಗಾಳಿ ಮಳೆಗೆ ಮರದ ಟೊಂಗೆ ಬಿದ್ದು ಮನೆಯ ಚಾವಣಿಯ ಸಿಮೆಂಟ್ ಶೀಟ್​ಗಳು ಒಡೆದು ಹೋಗಿದೆ. ಜೊಯಿಡಾದ ದಿವಾಕರ ಕುಂಡಲಕರ ಇವರ ಹೊಲದಲ್ಲಿನ ಮನೆಯ ಶೀಟ್​ಗಳು ಹಾರಿ ಬಿದ್ದಿವೆ. ಜೊಯಿಡಾ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಹುಡಸಾ ರಸ್ತೆಯಲ್ಲಿ ಒಣಗಿದ ಮರವೊಂದು ಗಾಳಿ ಮಳೆಗೆ ರಸ್ತೆ ಮೇಲೆ ಬಿದ್ದುದ್ದನ್ನು ನಂತರ ತೆರವು ಗೊಳಿಸಲಾಗಿದೆ.

    ಹಾರಿಹೋದ ಸೊಸೈಟಿ ಛಾವಣಿ: ಸಿದ್ದಾಪುರ: ತಾಲೂಕಿನ ಹಲವೆಡೆ ಗಾಳಿ-ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಛಾವಣಿ ಹಾರಿ ಹೋಗಿ ಪಶು ಆಹಾರ, ಪಡಿತರ ಅಕ್ಕಿ ಚೀಲಕ್ಕೆ ಹಾನಿ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ 4ಗಂಟೆ ಸುಮಾರಿಗೆ ಬೀಸಿದ ಗಾಳಿಯಿಂದಾಗಿ ಹತ್ತಕ್ಕೂ ಹೆಚ್ಚು ತಗಡಿನ ಶೀಟುಗಳು ಹಾರಿಹೋಗಿದೆ. ಮಳೆಯಿಂದಾಗಿ 50 ಚೀಲ ಪಶು ಆಹಾರ, ಪಡಿತರ ವಿತರಣೆಗಾಗಿದ್ದ 40 ಚೀಲ ಅಕ್ಕಿ ಮಳೆಯಿಂದ ಹಾನಿಗೊಳಗಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ. ತಾಲೂಕಿನಲ್ಲಿ ಗಾಳಿಗೆ ಸುಮಾರು 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ನೀಡುವುದಕ್ಕೆ ಹೆಸ್ಕಾಂ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts