More

    ಶಿಡ್ಲಗುಂಡಿ, ಬಡ್ಡಿಗೇರಿ ಕಂಟೇನ್ಮೆಂಟ್ ವಲಯ

    ಮುಂಡಗೋಡ: ತಾಲೂಕಿನ ಶಿಡ್ಲಗುಂಡಿ ಹಾಗೂ ಬಡ್ಡಿಗೇರಿ ಗ್ರಾಮಗಳಲ್ಲಿ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗಳಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಇವೆರಡೂ ಗ್ರಾಮಗಳನ್ನು ಕಂಟೇನ್ಮೆಂಟ್ ವಲಯಗಳಾಗಿ ಘೊಷಿಸಲಾಗಿದೆ.

    ಈ ಗ್ರಾಮಗಳಿಂದ 7 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ವಲಯ ಎಂದು ಘೊಷಿಸಲಾಗಿದೆ. ಈ ಗ್ರಾಮಗಳಿಗೆ ಬರುವುದಕ್ಕೆ ಮತ್ತು ಹೋಗುವುದಕ್ಕೆ ಒಂದೇ ಮಾರ್ಗವಿದ್ದು, ಬೇರೆ ಮಾರ್ಗಗಳನ್ನೆಲ್ಲ ಬಂದ್ ಮಾಡಲಾಗಿದೆ. ಇಲ್ಲಿರುವ ಎರಡು ಶಾಲೆಗಳಲ್ಲಿ ಬಂದೋಬಸ್ತ್​ಗಾಗಿ ಪೊಲೀಸ್ ಇಲಾಖೆ, ತಪಾಸಣೆಗಾಗಿ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ ಇರುತ್ತಾರೆ. ಅವಶ್ಯ ಸಾಮಗ್ರಿಗಳ ಪೂರೈಕೆಗೆ ಒಂದು ತಂಡ, ಆರೋಗ್ಯ ಸಮೀಕ್ಷೆಗಾಗಿ ಒಂದು ತಂಡ ಮತ್ತು ಮೇಲುಸ್ತುವಾರಿಯಾಗಿ ಒಬ್ಬರು ತಾಲೂಕು ಮಟ್ಟದ ನೋಡಲ್ ಅಧಿಕಾರಿ ಇರುತ್ತಾರೆ. ದಿನಸಿ ವಿತರಣೆಗಾಗಿ ಸ್ಥಳೀಯ ದಿನಸಿ ಅಂಗಡಿಕಾರರ ಮಾಹಿತಿ ಪಡೆಯಲಾಗಿದ್ದು, ಅವರ ಸೇವೆಯನ್ನೂ ಬಳಸಬಹುದಾಗಿದೆ. ಕನಿಷ್ಠ 14 ದಿನಗಳ ಕಾಲ ಇವೆರಡೂ ಗ್ರಾಮದವರು ಹೊರಗೆ ಹೋಗುವಂತಿಲ್ಲ. 28 ದಿನಗಳ ದಾಖಲೆ ಇರುತ್ತದೆ. ಸತತ ಆರೋಗ್ಯ ತಪಾಸಣೆಗಾಗಿ ಒಬ್ಬರನ್ನು ನೇಮಕ ಮಾಡಲಾಗಿದೆ. ಸಹಾಯವಾಣಿ ಕೇಂದ್ರವನ್ನು ಕೂಡ ತೆರೆಯಲಿದ್ದು, ಕಂಟೇನ್ಮೆಂಟ್ ವಲಯದಲ್ಲಿದ್ದವರು ಸಮಸ್ಯೆಗಳನ್ನು ದೂರವಾಣಿ ಮೂಲಕ ತಿಳಿಸಿದರೆ ಅವರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts