More

    ಶಿಕ್ಷಣ ನೀಡಿದ ಸಂಸ್ಥೆ ಬಗ್ಗೆ ಅಭಿಮಾನವಿರಲಿ

    ಬಾಗಲಕೋಟೆ: ಶಿಕ್ಷಣ ಸಂಸ್ಥೆ ಕೇವಲ ಪದವಿ ನೀಡುವುದಿಲ್ಲ. ಅದು ಬದುಕು ರೂಪಿಸುತ್ತದೆ. ಶಿಕ್ಷಣ ನೀಡಿ ಬದುಕು ರೂಪಿಸಿದ ಸಂಸ್ಥೆಯ ಬಗ್ಗೆ ಅಭಿಮಾನವಿರಲಿ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.
    ನಗರದ ಬಿವಿವಿ ಸಂಘದ ಪಿ.ಎಂ.ನಾಡಗೌಡ ಸ್ಮಾರಕ ದಂತ ಮಹಾವಿದ್ಯಾಲಯದ ಕಂಜರ್ವೇಟಿವ್ ಡೆಂಟಿಸ್ಟ್ರಿ ವಿಭಾಗದ ಬೆಳ್ಳಿ ಹಬ್ಬದ ಆಚರಣೆ ಮತ್ತು ಹಳೆಯ ವಿದ್ಯಾರ್ಥಿಗಳ ಸ್ನೇಹಮಿಲನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಬೆಳ್ಳಿ ಹಬ್ಬ ಆಚರಿಸುವುದು ಅತ್ಯಂತ ಹೆಮ್ಮೆ ಮತ್ತು ಅಭಿಮಾನದ ವಿಷಯ. ಕಳೆದ ೨೫ ವರ್ಷಗಳಲ್ಲಿ ಈ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದ ದಂತ ವೈದ್ಯರು ದೇಶದ ವಿವಿಧ ಡೆಂಟಲ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದೇಶಗಳಲ್ಲೂ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಸಂಸ್ಥೆಯ ಬೆಳವಣಿಗೆಗೆ ಅಗತ್ಯದ ಮಾರ್ಗದರ್ಶನ ನೀಡಿ. ಜೊತೆಗೆ ಸಮುದಾಯಕ್ಕೆ ಅನುಕೂಲವಾಗುವಂತೆ ಸಂಶೋಧನಾ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಹೇಳಿದರು.
    ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ, ಕಂಜರ್ವೇಟಿವ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ.ಪ್ರಹ್ಲಾದ ಸರಾಫ್, ಹಳೆಯ ವಿದ್ಯಾರ್ಥಿಗಳ ಸಂಘದ ಡಾ.ಸಂತೋಷ ಹೂಗಾರ ಇದ್ದರು. ಡಾ.ರತ್ನಾಕರ್ ಅತಿಥಿಗಳನ್ನು ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts