More

    ಶಿಕ್ಷಣ, ಕ್ರೀಡೆ ಎರಡೂ ಅತ್ಯಗತ್ಯ

    ಚಿತ್ರದುರ್ಗ: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದಷ್ಟೇ ಕ್ರೀಡೆಯೂ ಅತ್ಯಂತ ಮುಖ್ಯವಾಗಿದ್ದು, ಆಸಕ್ತಿ ಹೆಚ್ಚಿಸಿಕೊಳ್ಳಿ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.

    ದಾವಣಗೆರೆ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಚಳ್ಳಕೆರೆ ಎಚ್‌ಪಿಸಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ 3 ದಿನ ನಡೆದು ಬುಧವಾರ ಮುಕ್ತಾಯವಾದ ವಿವಿಯ ಅಂತರ ಕಾಲೇಜುಗಳ ಪುರುಷರ, ಮಹಿಳೆಯರ 12ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಹಾಗೂ ತಂಡದ ಆಯ್ಕೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

    134 ಕಾಲೇಜುಗಳ 800 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರ. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವನೆ ಪಾಲ್ಗೊಂಡು ಉತ್ತಮ ಕ್ರೀಡಾಪಟುವಾಗುವತ್ತ ಹೆಜ್ಜೆ ಇಡಬೇಕು ಎಂದು ಹೇಳಿದರು.

    ಪ್ರಾಚಾರ್ಯ ಡಾ.ಆರ್.ರಂಗಪ್ಪ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಮುಖ್ಯ. ಮಾನಸಿಕ, ದೈಹಿಕ ಸದೃಢತೆಗೆ ಸಹಕಾರಿ ಎಂದರು. ಪುರುಷರ ವಿಭಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ, ಮಹಿಳಾ ವಿಭಾಗದಲ್ಲಿ ಹೊನ್ನಾಳಿಯ ಎಸ್‌ಎಂಎಸ್ ಪ್ರಥಮ ದರ್ಜೆ ಕಾಲೇಜು ಚಾಂಪಿಯನ್ ಮುಡಿಗೇರಿಸಿಕೊಂಡವು.

    ದಾವಣಗೆರೆ ವಿವಿ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾಧಿಕಾರಿ ಡಾ.ವೀರಪ್ಪ, ಕ್ರೀಡಾಕೂಟದ ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ, ರಾಷ್ಟ್ರಮಟ್ಟದ ತೀರ್ಪುಗಾರ ಅರುಣ್, ಅನಿಲ್‌ಕುಮಾರ್, ಗಂಗಾಧರ್, ಡಾ.ವೀರೇಂದ್ರ, ಡಾ.ಪಾಪಣ್ಣ, ರಘುನಾಥ್, ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ, ಇತಿಹಾಸ ಉಪನ್ಯಾಸಕಿ ಜಯಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts