More

    ಶಿಕ್ಷಕ, ವೈದ್ಯ ವೃತ್ತಿಗೆ ಸಲಾಂ

    ಹುಬ್ಬಳ್ಳಿ: ಶಿಕ್ಷಕರು ಮಕ್ಕಳಿಗೆ ಜ್ಞಾನಧಾರೆ ಎರೆದರೆ, ವೈದ್ಯರು ರೋಗಿಗಳಿಗೆ ಜೀವದಾನ ಮಾಡುತ್ತಾರೆ. ಇಡೀ ಸಮಾಜ ಶಿಕ್ಷಕರು ಹಾಗೂ ವೈದ್ಯ ವೃತ್ತಿಗೆ ಗೌರವಕೊಡಬೇಕು ಎಂದು ಎಂಎಲ್​ಸಿ ಪ್ರೊ.ಎಸ್.ವಿ. ಸಂಕನೂರು ಹೇಳಿದರು.

    ಕಿಮ್್ಸ ಹಾಗೂ ಕಿಮ್್ಸ ಟೀಚರ್ಸ್ ಅಸೋಸಿಯೇಷನ್ ವತಿಯಿಂದ ನಗರದ ಕಿಮ್್ಸ ನೂತನ ಕಟ್ಟಡದ ಉಪನ್ಯಾಸ ಕೊಠಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

    ನಿವೃತ್ತಿ ಹೊಂದಿದ ಕಿಮ್್ಸ ಪ್ರಾಧ್ಯಾಪಕರಾದ ಡಾ. ಶಾಂತಾ ಹುನಗುಂದ, ಡಾ. ಗೀತಾ ಬತೀಜಾ ಅವರನ್ನು ಸನ್ಮಾನಿಸಲಾಯಿತು.

    ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚವ್ಹಾಣ, ಅಸೋಸಿಯೇಷನ್ ಅಧ್ಯಕ್ಷ ಡಾ. ಎಸ್.ಎಸ್. ಶಿರೋಳ, ಡಾ. ಕೆ.ಎಫ್. ಕಮ್ಮಾರ, ಇತರರು ಇದ್ದರು.

    ಅಸೋಸಿಯೇಷನ್ ಕಾರ್ಯದರ್ಶಿ ಡಾ. ಅರುಣ ವಾಳ್ವೇಕರ ಸ್ವಾಗತಿಸಿದರು. ಡಾ. ಶೋಭಾ ಪ್ರಾರ್ಥಿಸಿದರು. ಡಾ. ದೇವದಾಸ, ಡಾ. ಶಿವಕುಮಾರ ಅತಿಥಿಗಳನ್ನು ಪರಿಚಯಿಸಿದರು. ಡಾ. ಮನೀಶಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts