More

    ಶಿಕಾರಿಪುರದಲ್ಲಿ ಬೀರಲಿಂಗೇಶ್ವರ ಸ್ವಾಮಿ ದೇಗುಲ ಲೋಕಾರ್ಪಣೆ

    ಶಿಕಾರಿಪುರ: ಶರಣತ್ವ ನಮ್ಮಲ್ಲಿ ಆವಾಹನೆಯಾದಾಗ ಸಹನೆ, ಸಹಬಾಳ್ವೆ, ಸದ್ವಿಚಾರಗಳು ಸೃಜಿಸುತ್ತವೆ. ಧರ್ಮ ಕಾರ್ಯಗಳು ನಮ್ಮ ಬದುಕಿನ ಕಲ್ಮಶಗಳನ್ನು ದೂರ ಮಾಡುತ್ತವೆ. ಶರಣರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ ಎಂದು ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
    ಭಾನುವಾರ ವಿನಾಯಕ ನಗರದ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಶ್ರಾವಣ ಮಾಸ ಅತ್ಯಂತ ಪವಿತ್ರ. ಈ ಮಾಸದಲ್ಲಿ ಮಹಾತ್ಮರ ಬದುಕಿನ ಕಥನಗಳನ್ನು ಶ್ರವಣ ಮಾಡಬೇಕು. ಆಗ ಮನಸು ರಾಗದ್ವೇಷಗಳಿಂದ ಮುಕ್ತವಾಗುತ್ತದೆ. ಬೀರಲಿಂಗೇಶ್ವರ ಸ್ವಾಮಿ ಕುರುಬರು, ಹಾಲುಮತ ಸಮಾಜದವರಿಗೆ ಮೀಸಲಲ್ಲ. ಬೀರಲಿಂಗೇಶ್ವರ ಶೈವಸ್ವರೂಪಿ. ಎಲ್ಲರೂ ಸ್ವಾಮಿಯ ಆರಾಧನೆ ಮಾಡುತ್ತಾರೆ ಎಂದರು.
    ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಠ, ಮಂದಿರಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಮಠಗಳು ಕಾಲ ಕಾಲಕ್ಕೆ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿವೆ ಎಂದು ತಿಳಿಸಿದರು. ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts