More

    ಶಾಲಾ ವಾಹನ, ಪಾಲನೆಯಾಗದ ನಿಯಮ

    ರವಿ ಗೋಸಾವಿ ಬೆಳಗಾವಿ: ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂ.ಶುಲ್ಕ ಪಾವತಿಸುವ ಪಾಲಕರಲ್ಲಿ ಶಾಲಾ ವಾಹನದಲ್ಲಿ ತಮ್ಮ ಮಕ್ಕಳೆಷ್ಟು ಸುರಕ್ಷತೆಗೆ ಕಾಳಜಿಯೇ ಇಲ್ಲ. ಹಲವು ಪ್ರತಿಷ್ಠಿತ ಶಾಲೆಗಳಲ್ಲಿಯೂ ಅಷ್ಟೇ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ನೀಡುವಷ್ಟು ಆದ್ಯತೆ ರಕ್ಷಣೆ ವಿಚಾರದಲ್ಲಿಲ್ಲ.

    ಜಿಲ್ಲಾದ್ಯಂತ ಶಾಲಾ ಅಕ್ಷಾರಭ್ಯಾಸ ನಡೆಸುತ್ತಿರುವ 5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿ ದಿನವೂ ಆಟೋ, ಶಾಲಾ ವಾಹನ ಹಾಗೂ ಕೆಎಸ್‌ಆರ್‌ಟಿಸಿ ವಾಹನಗಳಲ್ಲಿ ಸಂಚರಿಸುತ್ತಿದ್ದು, ಬಹುತೇಕ ಆಟೋ ಹಾಗೂ ಶಾಲಾ ವಾಹನಗಳಲ್ಲಿ ಸುರಕ್ಷತಾ ನಿಯಮಗಳನ್ನೇ ಪಾಲಿಸುತ್ತಿಲ್ಲ. ಪ್ರತಿನಿತ್ಯ ಶಾಲೆ ಆರಂಭ ಮತ್ತು ಮುಕ್ತಾಯದ ಸಂದರ್ಭದಲ್ಲಿನ ವಾಹನಗಳನ್ನು ಕಂಡರೆ ಎಂಥವರಿಗಾದರೂ ಇದು ಅರ್ಥವಾಗುತ್ತದೆ. ಶಾಲಾ ಮಕ್ಕಳ ಸುರಕ್ಷತೆಗಾಗಿ ವಾಹನಗಳ ವ್ಯವಸ್ಥೆ ಮಾಡುವಲ್ಲಿ ನಿಯಮಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ಸರ್ಕಾರ ನಿಯಮಗಳನ್ನು ರೂಪಿಸಿ ಜಾರಿಗೆ ತಂದಿದೆ. ಆದರೆ, ಸಾಕಷ್ಟು ನಿಯಮಗಳ ಪಾಲನೆ ಆಗುತ್ತಿಲ್ಲ. ಕೆಲವು ಶಾಲೆಗಳು ಮಾತ್ರ ನಿಯಮಗಳನ್ನು ಅನುಸರಿಸಿ ಶಾಲಾ ಬಸ್‌ಗಳನ್ನು ನಿಯೋಜಿಸಿರುತ್ತಾರೆ.

    ದುಬಾರಿ ಶುಲ್ಕ ವಿಧಿಸಿದರೂ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಆದರೆ, ಸಾಕಷ್ಟು ಶಾಲೆಗಳಲ್ಲಿ ಶಾಲಾ ವಾಹನಗಳ ವ್ಯವಸ್ಥೆಯೇ ಇಲ್ಲ. ಕೆಲವು ಕಡೆ ಇದ್ದರೂ, ನಿಯಮಾನುಸಾರ ಸುರಕ್ಷಿತ ವ್ಯವಸ್ಥೆ ಇಲ್ಲ. ಸುರಕ್ಷತಾ ಕ್ರಮಗಳು ಕುರಿತು ಪರಿಶೀಲಿಸಿ ದಂಡ ವಿಧಿಸಿ, ಸುರಕ್ಷತೆ ಕ್ರಮಗಳ ಪಾಲನೆಗೆ ಆದ್ಯತೆ ನೀಡಬೇಕಿದ್ದ ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತರಾಗಿರುವುದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಸಮಾಧಾನಕ್ಕೆ ಕಾರಣವಾಗಿದೆ. ನಿಯಮಗಳನ್ನು ಪಾಲಿಸದ ಶಾಲೆಯ ಮಾನ್ಯತೆ ರದ್ದುಪಡಿಸಲು ಶಿಫಾರಸು ಮಾಡುವ ಅಧಿಕಾರ ಆರ್‌ಟಿಒ, ಪೊಲೀಸ್, ಶಿಕ್ಷಣ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಗಿದೆ. ಆದರೆ, ಜಿಲ್ಲಾದ್ಯಂತ ಎಲ್ಲಿಯೂ ಕಟ್ಟುನಿಟ್ಟಿನ ಕ್ರಮ ಜರುಗದಿರುವುದು ಸಮಿತಿಯ ಕಾರ್ಯವೈಖರಿ ತೋರಿಸುತ್ತದೆ. ಹೀಗಾಗಿಯೇ ಶಾಲಾ ವಾಹನಗಳು ಅಪಘಾತಕ್ಕೀಡಾಗಿ ಮಕ್ಕಳು ಗಾಯಗೊಳ್ಳುತ್ತಿರುವುದು ಮುಂದುವರಿದೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts