More

    ಶಾಲಾ ಮಕ್ಕಳಿಗೆ ಸೌಕರ್ಯ ಕಲ್ಪಿಸಲು ಕ್ರಮ

    ರಾಯಬಾಗ: ಮತಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ, ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಎಲ್ಲ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು. ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಶಿಕ್ಷಣ ಇಲಾಖೆಯ ವಿವೇಕ ಯೋಜನೆಯಡಿ ಮಂಜೂರಾದ ಒಟ್ಟು 58.70 ಲಕ್ಷ ರೂ. ಅನುದಾನದಲ್ಲಿ ಪಟ್ಟಣದ ಬ್ರಹ್ಮಾನಂದ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ 1 ಕೊಠಡಿ ನಿರ್ಮಾಣ, ಮಳವಾಡ ತೋಟದ ಸ.ಕಿ.ಪ್ರಾ.ಶಾಲೆಗೆ ಹೆಚ್ಚುವರಿ 1 ಕೊಠಡಿ ನಿರ್ಮಾಣ, ಖನದಾಳೆ ತೋಟದ ಹಿ.ಪ್ರಾ.ಶಾಲೆಗೆ 1 ಕೊಠಡಿ ನಿರ್ಮಾಣ ಹಾಗೂ ಸರ್ಕಾರಿ ಪ್ರೌಢಶಾಲೆಗೆ 1 ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಿವೇಕ ಯೋಜನೆಯಡಿ ಪ್ರತಿ ಸರ್ಕಾರಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಿಸಲು ಅನುದಾನ ಮಂಜೂರು ಮಾಡುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕೊಠಡಿ ನಿರ್ಮಿಸಬೇಕೆಂದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆ ಬೋಧನೆ ಮಾಡಬೇಕು.

    ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಶೌಚಗೃಹ, ತಡೆಗೋಡೆ, ಶುದ್ಧ ನೀರಿನ ಘಟಕ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು. ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಮಹಾದೇವ ಮುದ್ದಾಪೂರೆ, ಭೀಮಪ್ಪ ನಾಯಿಕವಾಡಿ, ಹಾಲಪ್ಪ ಪೀರಗಿಪಾಟೀಲ, ಮಹೇಶ ಕರಮಡಿ, ನಟರಾಜ ಮಾವರಕರ, ಪ್ರಕಾಶ ಮಳವಾಡ, ಸದಾಶಿವ ಶೆಟ್ಟಿ, ರಮೇಶ ಪೂಜಾರಿ, ಬಸವರಾಜ ಐನಾಪೂರ, ಐ.ಬಿ.ದೇಸಾಯಿ, ವಿಠಲ ಪಾಮದಿನ್ನಿ, ರಂಗವ್ವ ಸಂಗಾಯಿಗೊಳ, ಉಜ್ವಲ ಮಸರಗೊಪ್ಪಿ, ರಮೇಶ ಮಂಟೂರ, ಅಭಿಯಂತ ಸಿ.ಎಸ್.ಕಾಂಬಳೆ, ಅನಿತಾ ಅಣ್ಣಪ್ಪಗೋಳ, ಶಂಕರ ಬಳ್ಳಾರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts