More

    ಶಾರದಾ ಪುರಸ್ಕಾರ ಪ್ರಶಸ್ತಿ ಪ್ರದಾನ 25ಕ್ಕೆ 

    ದಾವಣಗೆರೆ: ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗರದ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನವು ಗೌರಮ್ಮ ನರಹರಿಶೇಟ್ ಸಭಾ ಭವನದಲ್ಲಿ ಜೂ. 25ರಂದು ಬೆಳಗ್ಗೆ 10-30ಕ್ಕೆ ಶಾರದಾ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಿದೆ.
    ನಗದು ಬಹುಮಾನ, ಸನ್ಮಾನಪತ್ರದೊಂದಿಗೆ ರಾಜ್ಯದ 145ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್‌ಶೆಣೈ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮುಂಬೈನ ಅಖಿಲ ಭಾರತ ದೈವಜ್ಞ ಸಮಾಜದ ಅಧ್ಯಕ್ಷ ದಿನಕರ ಶಂಕರ ಬೈಕೇರಿಕರ್ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿಷ್ಠಾನದ ಸಂಸ್ಥಾಪಕ ಡಾ. ನಲ್ಲೂರು ಅರುಣಾಚಲ ಎನ್. ರೇವಣಕರ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
    ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕದ ಅಧ್ಯಕ್ಷ ಡಾ.ಮಂಜುನಾಥ ಎಸ್.ರೇವಣಕರ್, ಗೋವಾದ ರೇವಣದ ವಿಮಲೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ರಾಮನಾಥ ಪ್ರಭುದೇಸಾಯಿ, ದೈವಜ್ಞ ಸಮಾಜದ ನೂತನ ಅಧ್ಯಕ್ಷ ಪ್ರಶಾಂತ ವಿಶ್ವನಾಥ ವರ್ಣೇಕರ್ ಆಗಮಿಸುವರು ಎಂದು ತಿಳಿಸಿದರು.
    ವೈದ್ಯಕೀಯ ಕ್ಷೇತ್ರದ ಯುವ ಪ್ರತಿಭೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಡಾ. ಸೋನಿಯಾ ರಾಜೇಶ್ ಪಾವಸ್ಕರ್, ಶೈಕ್ಷಣಿಕ ಸಾಧಕಿ ಹಾಸನ ಜಿಲ್ಲೆ ಅರಸೀಕೆರೆಯ ಸಹನಾ ಬೈರೇಶ್ವರ ಶೇಟ್ ಅವರನ್ನು ಸನ್ಮಾನಿಸಲಾಗುವುದು ಎಂದರು.
    ಸುದ್ದಿಗೋಷ್ಠಿಯಲ್ಲಿ ನಲ್ಲೂರು ಲಕ್ಷ್ಮಣರಾವ್, ನಲ್ಲೂರು ಅರುಣಾಚಲ ರೇವಣಕರ್, ಪ್ರೇಮಾ ರೇವಣಕರ್ ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts