More

    ಶಸ್ತ್ರಚಿಕಿತ್ಸೆಗೆ ಕೌಶಲ ಅಗತ್ಯ

    ಬೆಳಗಾವಿ: ಶಸ್ತ್ರಚಿಕಿತ್ಸೆಗಾಗಿ ಅನೇಕ ಸೂಪರ್ ಸ್ಪೆಶಾಲಿಟಿ ಉಪವಿಭಾಗಗಳು ಬಂದರೂ ಶಸ್ತ್ರಚಿಕಿತ್ಸೆ ಸುಲಭವಲ್ಲ. ಅದಕ್ಕೆ ಕೌಶಲ ಅಗತ್ಯ ಎಂದು ಕಾಹೆರ್ ಉಸ್ತುವಾರಿ ಉಪಕುಲಪತಿ ಡಾ. ಎನ್.ಎಸ್ ಮಹಾಂತಶೆಟ್ಟಿ ಹೇಳಿದರು.

    ನಗರದ ಕೆಎಲ್‌ಇ ಕಾಹೆರ್, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಶಸ್ತ್ರಚಿಕಿತ್ಸಾ ವಿಭಾಗವು ಈಚೆಗೆ ಹಮ್ಮಿಕೊಂಡಿದ್ದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಒಳ್ಳೆಯ ವೈದ್ಯರು ನಿರಂತರವಾಗಿ ಬೆಳವಣಿಗೆ ಹೊಂದುವುದರ ಜತೆಗೆ ಸದಾ ಸೇವೆಯಲ್ಲಿ ತೊಡಗಿರುತ್ತಾರೆ. ಇಂದು ವೈದ್ಯಕೀಯ ಕ್ಷೇತ್ರ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸೇವೆ ಇನ್ನೂ ಉತ್ತಮಗೊಳಿಸಬೇಕಾಗಿದೆ. ಕೌಶಲ, ಪ್ರಯೋಗಾಲಯದ ಮೂಲಕ ವೈದ್ಯಕೀಯ ಕೌಶಲಾಧಾರಿತ ಶಿಕ್ಷಣ ಪಡೆದುಕೊಂಡು ಬುದ್ಧಿಮತ್ತೆ ಹೆಚ್ಚಿಸಿಕೊಂಡು, ಯುವ ವೈದ್ಯರು ಗ್ರಾಮೀಣ ಸೇವೆಗೆ ಮುಂದಾಗಬೇಕು. ಅದರಂತೆ ರೋಗಿಗಳ ಜತೆ ಒಳ್ಳೆಯ ಬಾಂಧವ್ಯದೊಂದಿಗೆ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು. ಕಾಹೆರ್ ಕುಲಸಚಿವ ಡಾ. ವಿ.ಎ ಕೋಠಿವಾಲೆ ಮಾತನಾಡಿ, ವೈದ್ಯ ವಿಜ್ಞಾನ ಮುಂದುವರಿದಂತೆಲ್ಲ ಅಷ್ಟೇ ವೇಗವಾಗಿ ತಂತ್ರಜ್ಞಾನವೂ ಅಭಿವೃದ್ಧಿಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂಗೈಯಲ್ಲಿ ಪ್ರತಿಯೊಂದು ಮಾಹಿತಿ ದೊರೆಯುತ್ತಿದ್ದು, ವೈದ್ಯಕೀಯ ಮಾಹಿತಿಯನ್ನೂ ಕೂಡ ಜಾಲತಾಣದಲ್ಲಿ ಹುಡುಕುವುದರಿಂದ ಎಲ್ಲವೂ ಸರಿಯಾದ ಮಾಹಿತಿ ಲಭಿಸುವುದಿಲ್ಲ. ಆದ್ದರಿಂದ ಸಾರ್ವಜನಿಕರು ಹಾಗೂ ವೈದ್ಯ ವಿದ್ಯಾರ್ಥಿಗಳು ನುರಿತ ತಜ್ಣರಿಂದ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಎಂದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ. ಎಂ.ದಯಾನಂದ ಮಾತನಾಡಿದರು. ಡಾ.ಆರಿಫ್ ಮಾಲ್ದಾರ್, ಡಾ. ರಾಜೇಶ ಪವಾರ, ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಶ್ರೀಶೈಲ ಮೆಟಗುಡ್ಡ, ಡಾ. ಪ್ರಮೋದ ಪಾಟೀಲ, ಡಾ. ಪ್ರವೀಣ ಕಮತಗಿ, ಡಾ. ಎ.ಎಸ್.ಗೋಗಟೆ, ಡಾ. ಎಂ.ಐ.ಉಪ್ಪಿನ, ಡಾ.ವಿ.ಎಂ. ಉಪ್ಪಿನ, ಡಾ.ರಮೇಶ ಕೌಜಲಗಿ, ಡಾ.ಮನೋಜ ತೊಗಳೆ, ಡಾ.ಬಿ.ಎಂ.ಕಾಜಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts