More

    ಶರಣ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

    ವಾಡಿ: ಶರಣರ ಚಿಂತನೆಗಳನ್ನು ಮೆಚ್ಚಿದರೆ ಸಾಲದು, ಅವುಗಳನ್ನು ಪಾಲಿಸುವ ಕೆಲಸವಾಗಬೇಕು. ಅಲ್ಲದೆ ಮನೆ- ಮನೆಗೂ ತಲುಪಿಸುವ ಕಾರ್ಯ ಮಾಡಬೇಕು ಎಂದು ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ದೇವರು ನುಡಿದರು.

    ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿ ಶ್ರಾವಣ ಮೊದಲ ಸೋಮವಾರ ನಿಮಿತ್ತ ಆಯೋಜಿಸಿದ್ದ ಶಿವಲಿಂಗ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜದ ಸುಧಾರಣೆಗೆ ಶ್ರಮಿಸಿದ ಸಂತರು, ಮಹಾತ್ಮರ ಚಿಂತನೆಗಳನ್ನು ಅರಿಯಲು ಶ್ರಾವಣ ಮಾಸ ಮೀಸಲಾಗಿದೆ. ಯುವಕರು ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

    ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಶರಣಗೌಡ ಪಾಟೀಲ್ ಚಾಮನೂರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಪ್ರಮುಖರಾದ ಪರುತಪ್ಪ ಕರದಳ್ಳಿ, ಸಿದ್ದಣ್ಣ ಕಲಶೆಟ್ಟಿ, ಅಣ್ಣಾರಾವ ಪಸಾರೆ, ಬಸವರಾಜ ಶೆಟಗಾರ, ಮಲ್ಲಣ್ಣಗೌಡ ಗೌಡಪ್ಪನೋರ, ಚನ್ನಪ್ಪ ಸೂಲಹಳ್ಳಿ, ಸಂಗಣ್ಣ ಇಂಡಿ, ಅಮೃತಪ್ಪ ದಿಗ್ಗಾಂವ್, ಅಶೋಕ ಖಾನಕುರ್ತೆ, ವೀರಣ್ಣಗೌಡ ನಾಲವಾರ, ವೀರಣ್ಣ ಯಾರಿ, ಮಹಾಲಿಂಗ ಶೆಳ್ಳಗಿ, ಕಾಶೀನಾಥ ಶೆಟಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts